Bengaluru, ಫೆಬ್ರವರಿ 14 -- OTT Malayalam Action Thriller: ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ 115 ಕೋಟಿ ರೂ. ಗಳಿಸಿದ ಮಲಯಾಳಂ ಆಕ್ಷನ್ ಥ್ರಿಲ್ಲರ್ ಮಾರ್ಕೊ ಸಿನಿಮಾ ಇದೀಗ ಒಟಿಟಿಗೆ ಪದಾರ್ಪಣೆ ಮಾಡಿದೆ. ಈ ಸಿನಿಮಾ ಮಲಯಾಳಂ ಜೊತೆಗೆ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ಆವೃತ್ತಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಮಾರ್ಕೊ ಚಿತ್ರವು ಶುಕ್ರವಾರದಿಂದ (ಫೆಬ್ರವರಿ 14) ಪ್ರಸಾರವಾಗಲಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಸೋನಿ ಲಿವ್ ಒಟಿಟಿ ಘೋಷಿಸಿತ್ತು. ಆ ಲೆಕ್ಕಾಚಾರದಂತೆ, ಗುರುವಾರ ಮಧ್ಯರಾತ್ರಿಯ ನಂತರ ಈ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ ಎಂದೇ ಹೇಳಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಫೆ. 13ರ ಮಧ್ಯಾಹ್ನದಿಂದಲೇ ಮಾರ್ಕೊ ಸ್ಟ್ರೀಮಿಂಗ್ ಆರಂಭಿಸಿದೆ. ಈ ವಿಚಾರವನ್ನು ಸೋನಿ ಲಿವ್ ಒಟಿಟಿ ತನ್ನ ಎಕ್ಸ್ ಖಾತೆಯ ಮೂಲಕ ಬಹಿರಂಗಪಡಿಸಿದೆ. "ಯುದ್ಧ ಆರಂಭವಾಗಿದೆ. ಮಾರ್ಕೊ ಬಂದಿದ್ದಾನೆ" ಎಂದು ಪೋಸ್ಟ್‌ ಮಾಡಿ, ಕ್ಯಾಪ್ಶನ್‌ ನೀಡಿತ್ತು.

ಮಾರ್ಕೊ ಮಲಯಾಳಂ ಚಿತ್...