ಭಾರತ, ಮಾರ್ಚ್ 6 -- Marco OTT: ಉನ್ನಿ ಮುಕುಂದನ್‌ ನಟನೆಯ ಮಾರ್ಕೊ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಸೋನಿ ಲಿವ್‌ ಒಟಿಟಿಯಿಂದ ತೆಗೆಯುವಂತೆ ಕೇರಳ ಸೆನ್ಸಾರ್‌ ಮಂಡಳಿಯು ಕೇಂದ್ರ ಸೆನ್ಸಾರ್‌ ಮಂಡಳಿಗೆ ಪತ್ರ ಬರೆದಿದೆ. ಕೇಂದ್ರ ಸೆನ್ಸಾರ್‌ ಮಂಡಳಿಯು (ಸಿಬಿಎಫ್ಸಿ) ಕ್ರಮ ಕೈಗೊಂಡರೆ ಒಟಿಟಿಯಿಂದಲೂ ಮಾರ್ಕೊ ಸಿನಿಮಾಕ್ಕೆ ಗೇಟ್‌ಪಾಸ್‌ ದೊರಕಲಿದೆ. ಈಗಾಗಲೇ ಕೇಂದ್ರ ಸೆನ್ಸಾರ್‌ ಮಂಡಳಿಯು ಮಾರ್ಕೊ ಸಿನಿಮಾಕ್ಕೆ ಸ್ಯಾಟ್‌ಲೈಟ್‌ ಪ್ರಸಾರದ ಹಕ್ಕುಗಳನ್ನು ನೀಡಲು ನಿರಾಕರಿಸಿತ್ತು. ಇದೀಗ ಒಟಿಟಿಯಲ್ಲೂ ನಿಷೇಧದ ಭೀತಿ ಎದುರಾಗಿದೆ.

ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಉನ್ನಿ ಮುಕುಂದನ್ ನಟನೆಯ ಮಾರ್ಕೊ (2024) ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ನಿಷೇಧಿಸುವಂತೆ ಸಿಬಿಎಫ್‌ಸಿ (ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿ) ಕೋರಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರ್ಕೊ ಸ್ಟ್ರೀಮಿಂಗ್ ನಿರ್ಬಂಧಿಸಲು ಕ್ರಮಕೈಗೊಳ...