Bengaluru, ಫೆಬ್ರವರಿ 2 -- Marco OTT: ಮಲಯಾಳಂ ಚಿತ್ರೋದ್ಯಮದಲ್ಲಿ ಪಕ್ಕಾ ಮಾಸ್‌ ಸಿನಿಮಾಗಳ ಆಗಮನ ಕೊಂಚ ಕಡಿಮೆ. ಆದರೆ, ಇತ್ತೀಚೆಗಷ್ಟೇ ಆ ಮಾಸ್‌ಗೆ ಮತ್ತಷ್ಟು ಮಸಾಲೆ ಹಾಕಿ ಪ್ರೇಕ್ಷಕರ ಮನತಣಿಸಿತ್ತು ಮಾರ್ಕೊ ಸಿನಿಮಾ. ಚಿತ್ರಮಂದಿರಗಳಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಸಿನಿಮಾ, ಮಾಲಿವುಡ್‌ನಲ್ಲಿ ಹಿಟ್‌ ಆದ ಬಳಿಕ, ಸೌತ್‌ನ ಇತರ ಭಾಷೆಗಳಲ್ಲಿಯೂ ಬಿಡುಗಡೆ ಆಗಿತ್ತು. ಪರಭಾಷಿಕರಿಂದಲೂ ಮೆಚ್ಚುಗೆ ಪಡೆದಿದ್ದ ಸಿನಿಮಾವನ್ನು ಹಿಂದಿ ಭಾಷಿಕರೂ ಎತ್ತಿ ಮೆರೆಸಿದ್ದರು. ಈಗ ಇದೇ ಮಾರ್ಕೊ ಸಿನಿಮಾದ ಒಟಿಟಿ ಆಗಮನದ ದಿನಾಂಕ ಫಿಕ್ಸ್‌ ಆಗಿದೆ.

ಕಳೆದ ವರ್ಷದ ಡಿಸೆಂಬರ್‌ 20ರಂದು ತೆರೆಗೆ ಬಂದಿದ್ದ ಮಾರ್ಕೊ ಸಿನಿಮಾ, ಅತ್ಯುತ್ತಮ ಆಕ್ಷನ್ ಸಿನಿಮಾ‌ ಎಂಬ ವಿಶೇಷಣ ಪಡೆದಿತ್ತು. ಕೆಜಿಎಫ್‌, ಅನಿಮ‌ಲ್, ಕಿಲ್‌ ಸಿನಿಮಾಗಳಿಗೂ ಅಧಿಕ ವೈಲೆಂಟ್‌ ಸಿನಿಮಾ ಎಂದು ಕರೆಸಿಕೊಂಡಿತ್ತು. ಉನ್ನಿ ಮುಕುಂದನ್‌ ಅಕ್ಷರಶಃ ರಗಡ್‌ ಅವತಾರದಲ್ಲಿ ತೆರೆಮೇಲೆ ಜೀವಿಸಿದ್ದರು. ಸರಿ ಸುಮಾರು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸ್‌ ಆಫ...