Bengaluru, ಮಾರ್ಚ್ 9 -- Marali Manasagide: ಬೆನಕ ಟಾಕೀಸ್ ಬ್ಯಾನರ್‌ನಲ್ಲಿ ಮುದೇಗೌಡ್ರು ನವೀನ್ ಕುಮಾರ್ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಿಸಿರುವ ಸಿನಿಮಾ ಮರಳಿ ಮನಸಾಗಿದೆ. ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ ಈ ಚಿತ್ರದ ಮೊದಲ ಹಾಡನ್ನು ಶಾಸಕ‌ ಅಶ್ವಥ್ ನಾರಾಯಣ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವಿನು‌ ಮನಸು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು A2 MUSIC ಮೂಲಕ ಬಿಡುಗಡೆಯಾಗಿದೆ.

ಇದೊಂದು ಸಂಗೀತ ಪ್ರಧಾನ ಚಿತ್ರ. ವಿನು ಮನಸು ಸಂಗೀತ ನೀಡಿರುವ ಸುಮಧುರ ಹಾಡುಗಳು‌ ಈ ಚಿತ್ರದಲ್ಲಿದೆ. ಆ ಪೈಕಿ "ಎದುರಿಗೆ ಬಂದರೆ ಹೃದಯಕೆ ತೊಂದರೆ..." ಎಂಬ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಆಶಿತ್ ಸುಬ್ರಹ್ಮಣ್ಯ ಹಾಗೂ ಶ್ರೀನಿಧಿ ಬರೆದಿರುವ ಈ ಹಾಡನ್ನು ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ. ಇನ್ನು‌ ಇದೊಂದು ಯುವಜನತೆಗೆ ಹತ್ತಿರವಾದ ಚಿತ್ರದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು‌ ತಿಳಿಸುವ ಚಿತ್ರವೂ ಹೌದು.‌ ಇದರೊಟ್ಟಿಗೆ ಮೆಡಿಕಲ್‌ಗೆ ಸಂಬಂಧಿಸಿದ ವಿಷಯ ಸಹ ಇದೆ. ಇದು...