ಭಾರತ, ಏಪ್ರಿಲ್ 5 -- ಹಿರಿಯ ನಟ ಮನೋಜ್‌ ಕುಮಾರ್‌ ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ನಮನ ಸಲ್ಲಿಸಲಾಯಿತು.

ವಯಸ್ಸಹಜ ಅನಾರೋಗ್ಯದಿಂದ 87ನೇ ವಯಸ್ಸಿನಲ್ಲಿ ಮನೋಜ್‌ ಕುಮಾರ್‌, ಶುಕ್ರವಾರ ಕೊಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. ಇಂದು (ಏ. 5) ಬೆಳಗ್ಗೆ 11:30ರ ಸುಮಾರಿಗೆ ಪುತ್ರರಾದ ವಿಶಾಲ್‌ ಮತ್ತು ಕುನಾಲ್‌, ಅಂತ್ಯಕ್ರಿಯೆ ನೆರವೇರಿಸಿದರು.

ಮುಂಬೈನಲ್ಲಿ ನೆರವೇರಿದ ಅಂತ್ಯಕ್ರಿಯೆಯಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ‌ ಮತ್ತು ಅಭಿಷೇಕ್‌ ಬಚ್ಚನ್‌ ಸಹ ಭಾಗವಹಿಸಿ, ಮನೋಜ್ ಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರು ಜುಹುದಲ್ಲಿರುವ ಪವನ್ ಹನ್ಸ್ ಶವಾಗಾರದಲ್ಲಿ ಪರಸ್ಪರ ಮುಖಾಮುಖಿಯಾದ ಸಂದರ್ಭ.

"ವೋ ಕೌನ್ ಥಿ?", "ಶಹೀದ್", "ಉಪ್ಕಾರ್", "ಅನಿತಾ", "ಸನ್ಯಾಸಿ", "ಕ್ರಾಂತಿ" ಸೇರಿ 80ಕ್ಕೂ ಅಧಿಕ ಚಿತ್ರಗಳಲ್ಲಿ ಮನೋಜ್‌ ಕುಮಾರ್‌ ನಟಿಸಿದ್ದಾರೆ....