ಭಾರತ, ಏಪ್ರಿಲ್ 4 -- Actor Manoj Kumar passes away: ಭಾರತೀಯ ಚಿತ್ರರಂಗದ ಖ್ಯಾತನಟ ಮತ್ತು ಚಲನಚಿತ್ರ ನಿರ್ಮಾಪಕ ಮನೋಜ್ ಕುಮಾರ್ ನಿಧನ (ಏಪ್ರಿಲ್ 4, 2025) ರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವಾರು ಚಿತ್ರಗಳಲ್ಲಿ ದೇಶಭಕ್ತಿಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಇವರು ಇಂದು ಬೆಳಗ್ಗೆ 4:03 ಗಂಟೆಗೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ದೇಶಪ್ರೇಮದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದರಿಂದ ಭರತ್‌ ಕುಮಾರ್‌ ಎಂದೇ ಖ್ಯಾತರಾಗಿದ್ದರು.

ತೀವ್ರ ಹೃದಯಾಘಾತದಿಂದಾಗಿ ಕಾರ್ಡಿಯೋಜೆನಿಕ್ ಆಘಾತ ಉಂಟಾಗಿ ಇವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮನೋಜ್‌ ಕುಮಾರ್ ಕಳೆದ ಕೆಲವು ತಿಂಗಳುಗಳಿಂದ ಡಿಕಂಪನ್ಸೇಟೆಡ್ ಲಿವರ್ ಸಿರೋಸಿಸ್‌ನಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದರಿಂದ ಆರೋಗ್ಯ ಹದಗೆಟ್ಟ ಬಳಿಕ ಫೆಬ್ರವರಿ 21, 2025 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮನೋಜ್ ಕುಮಾರ್ ಜುಲೈ 24, 1937 ರಂದು ಪಂಜಾಬ್‌ನ ಅಮ...