Imphal, ಫೆಬ್ರವರಿ 9 -- Manipur CM Quits: ಬಿಜೆಪಿ ಹಿರಿಯ ನಾಯಕ ಹಾಗೂ ಮಣಿಪುರ ರಾಜ್ಯದ ಮುಖ್ಯಮಂತ್ರಿ ಎನ್‌. ಬೀರೇನ್‌ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸತತವಾಗಿ ಎರಡು ವರ್ಷದಿಂದ ಹಿಂಸಾಚಾರಕ್ಕೆ ಒಳಗಾಗಿ ನೂರಾರು ಜನರು ಪ್ರಾಣ ಕಳೆದುಕೊಂಡು ಇಡೀ ಮಣಿಪುರ ರಾಜ್ಯ ಸಾಮಾಜಿಕ ಸ್ಥಿತಿ ಏರುಪೇರು ಆಗಿರುವ ನಡುವೆಯೇ ಬೀರೇನ್‌ಸಿಂಗ್‌ ಅವರು ಪದತ್ಯಾಗ ಮಾಡಿದ್ದಾರೆ. ಬಿಜೆಪಿ ಹಿರಿಯ ನಾಯಕರ ಸೂಚನೆ ಮೇರೆಗೆ ಅವರು ಭಾನುವಾರ ತಮ್ಮ ರಾಜೀನಾಮೆ ಪತ್ರವನ್ನು ಮಣಿಪುರ ರಾಜ್ಯಪಾಲ ಅಜಯಕುಮಾರ್‌ ಭಲ್ಲಾ ಅವರಗೆ ಸಲ್ಲಿಸಿದ್ದಾರೆ. ಬೀರೇನ್‌ ಸಿಂಗ್‌ ಅವರನ್ನು ಬದಲಿಸುವಂತೆ ಬಿಜೆಪಿಯಲ್ಲಿಯೇ ಒತ್ತಡ ಹೆಚ್ಚಿತ್ತು. ಎನ್‌ಡಿಎ ಮಿತ್ರ ಪಕ್ಷಗಳೂ ಒತ್ತಡ ಹೇರಿದ್ದರಿಂದ ಅವರ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ ಎನ್ನಲಾಗುತ್ತಿದೆ.

ಮೂರು ವರ್ಷದ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಎನ್‌.ಬಿರೇನ್‌ ಸಿಂಗ್‌ ಎರಡನೇ ಬಾರಿ ಸಿಎಂ ಆಗಿದ್ದರು. 2022 ರಲ್ಲಿ ಅಧಿಕಾರಕ್ಕೆ ಬಂದ ಮರು ವರ್ಷದಲ್ಲೇ ಮಣಿಪುರ...