Bangalore, ಏಪ್ರಿಲ್ 4 -- ಕರ್ನಾಟಕದಲ್ಲಿ ಮಾವಿನ ಋತುವು ಸಾಮಾನ್ಯವಾಗಿ ಏಪ್ರಿಲ್ ಮೊದಲ ಹದಿನೈದು ದಿನಗಳಿಂದ ಜೂನ್ ಅಂತ್ಯದವರೆಗೆ ಬರುತ್ತದೆ. ಈ ಬಾರಿಯೂ ಮಾವಿನ ಹಣ್ಣು ಮಾರುಕಟ್ಟೆಗೆ ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸತೊಡಗಿದೆ.

ಮಾವಿನ ಹಣ್ಣುಗಳನ್ನು ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ ಹಾವೇರಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ.

ಕಳೆದ ವರ್ಷ, ನಾವು ತಮಿಳುನಾಡಿನಿಂದ ಆಮದನ್ನು ಅವಲಂಬಿಸಿದ್ದೆವು, ಏಕೆಂದರೆ ನಾವು ರಾಜ್ಯದಲ್ಲಿ ಕೇವಲ ಆರರಿಂದ ಏಳು ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣನ್ನು ಉತ್ಪಾದಿಸಿದ್ದೇವೆ. ಆದರೆ, ಈ ವರ್ಷ, ಅದು 10 ಲಕ್ಷ ಮೆಟ್ರಿಕ್ ಟನ್‌ಗೆ ಏರುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (ಕೆಎಸ್‌ಎಮ್‌ಡಿಎಂಸಿಎಲ್) ನ ವ್ಯವಸ್ಥಾಪಕ ನಿರ್ದೇಶಕ ಸಿ ಜಿ ನಾಗರಾಜು

ಕೋಲಾರ, ರಾಮನಗರ ಸೇರಿದಂತೆ ನಾನಾ ಭಾಗಗಳಿಂದ ಬೆಂಗಳೂರಿನ ಮಾರುಕಟ್ಟೆಗೆ ಗುರುವಾರದಿಂದಲೇ ...