Bengaluru, ಫೆಬ್ರವರಿ 5 -- Mango Pachcha: ಕಿಚ್ಚ ಸುದೀಪ್‌ ಅಕ್ಕನ ಮಗ ಸಂಚಿತ್ ಸಂಜೀವ್‌ ಇದೀಗ ಸ್ಯಾಂಡಲ್‌ವುಡ್‌ಗೆ ರಗಡ್‌ ಆಗಿಯೇ ಎಂಟ್ರಿಕೊಡುತ್ತಿದ್ದಾರೆ. ಚೊಚ್ಚಲ ಚಿತ್ರಕ್ಕೆ ಕ್ರೇಜಿಯಾಗಿರೋ ಶೀರ್ಷಿಕೆಯ ಜತೆಗೆ ಆಗಮಿಸಿದ್ದಾರೆ. ಇತ್ತೀಚೆಗಷ್ಟೇ ಗ್ರ್ಯಾಂಡ್‌ ಆಗಿ ಮುಹೂರ್ತ ಮುಗಿಸಿಕೊಂಡ ಚಿತ್ರತಂಡವೀಗ, ನಾಯಕ ಸಂಚಿತ್ ಬರ್ತ್‌ಡೇ ಪ್ರಯುಕ್ತ, ಚಿತ್ರದ ಶೀರ್ಷಿಕೆ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಚಿತ್ರಕ್ಕೆ ಮ್ಯಾಂಗೊ ಪಚ್ಚ ಎಂದು ಹೆಸರಿಡಲಾಗಿದೆ.‌

ಸಂಚಿತ್ ಹುಟ್ಟುಹಬ್ಬದ ಪ್ರಯುಕ್ತ ಪ್ರೋಮೋ ರಿಲೀಸ್ ಮಾಡುವ ಜೊತೆಗೆ ಟೈಟಲ್ ಕೂಡ ಅನಾವರಣ ಮಾಡಲಾಗಿದೆ. ಸಂಚಿ ಚೊಚ್ಚಲ ಸಿನಿಮಾಗೆ 'ಮ್ಯಾಂಗೋ ಪಚ್ಚ' ಎಂದು ಟೈಟಲ್ ಇಡಲಾಗಿದೆ. ಕ್ರೇಜಿ ಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್‌ಗೆ ಎಂಟ್ರಿ ಕೊಡುವ ಫಾರಿನ್ ಲೇಡಿಗೆ ಡಿವಿಡಿ ಅಂಗಡಿ ಮಾಲೀಕನ ಬಗ್ಗೆ ಕಥೆ ಹೇಳುವ ಮೂಲಕ ಪ್ರೋಮೋ ಪ್ರಾರಂಭವಾಗಲಿದೆ. ಖಾಲಿ ಇರುವ ಟೇಬಲ್ ಯಾರದ್ದು ಎಂದು ಕೇಳುವ ಫಾರಿನ್ ಲೇಡಿಗೆ ಮ್ಯಾಂಗೋ ಪಚ್ಚನ ಕಥೆ ಹೇಳುವ ಮೂಲಕ ಸಂಚಿತ್ ಖಡಕ್...