ಭಾರತ, ಏಪ್ರಿಲ್ 2 -- ಮಂಗಳೂರು: 12 ಸಿಸಿ ಕ್ಯಾಮೆರಾ,‌ 11 ಹೈಬ್ರಿಡ್ ನಾಯಿಗಳು, 2 ಗಾರ್ಡ್ ಇರುವ 'ಮನೆಯೊಂದರಲ್ಲಿ ನಡೆದ ಕಳವು ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿದೇಶದಲ್ಲಿ ವಾಸ್ತವ್ಯವಿರುವ ಉದ್ಯಮಿಯೊಬ್ಬರ ದಕ್ಣಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿರುವ ಮನೆ ಇದು. ಬಿಗಿ ಭದ್ರತೆಯಿಂದ ಕೂಡಿದ 'ಮಾತೃಕೃಪಾ' ಮನೆಯಲ್ಲಿ ಲಾಕರ್ ಒಡೆದು ಸುಮಾರು 1ಕೆ.ಜಿಗೂ ಹೆಚ್ಚಿನ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಮಂಗಳವಾರ (ಎ.1) ಬೆಳಕಿಗೆ ಬಂದಿದೆ.

ಘಟನೆ ನಡೆದಿರುವುದು ಸೋಮವಾರ ಮಧ್ಯರಾತ್ರಿಯ ಬಳಿಕ (ಎ.1) ಎಂದು ಅಂದಾಜಿಸಲಾಗಿದ್ದು ಮನೆ ಮಾಲಿಕ ಪ್ರವೀಣ್ ಪಿಂಟೋ ಕುವೈಟ್ ನಲ್ಲಿ ನೆಲೆಸಿದ್ದಾರೆ.

ಮನೆಯ ಭದ್ರತೆಗಾಗಿ 12 ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿದ್ದು ಮಾತ್ರವಲ್ಲದೆ 11 ಹೈಬ್ರಿಡ್ ನಾಯಿಗಳನ್ನು ಸಾಕಲಾಗುತ್ತಿತ್ತು. ಮತ್ತು ಇಬ್ಬರು ಗಾರ್ಡ್ ಗಳು ಇದ್ದು ಇಷ್ಟೆಲ್ಲ ಬಿಗುಭದ್ರತೆಯ ನಡುವೆ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಪ್ರವೀಣ್ ಪಿಂಟೋ ಅವರ ತಂದೆ ಪಿಬಿ ಪ...