Mangalore, ಮಾರ್ಚ್ 6 -- Mangalore News: ಇನ್ನೂ ಲೈಸನ್ಸ್ ಪಡೆಯದ, ಪ್ರಾಪ್ತ ವಯಸ್ಕನಾಗದ ಬಾಲಕನೊಬ್ಬ ಸ್ಕೂಟರ್ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿದ ಪರಿಣಾಮ, ಆತನ ತಂದೆ 26,000 ರೂ ದಂಡ ಕಟ್ಟಿದ ಘಟನೆ ಬಂಟ್ವಾಳದಲ್ಲಿ ಬುಧವಾರ ನಡೆದಿದೆ.ಎರಡು ದಿನಗಳ ಹಿಂದೆ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಎಸ್.ಐ. ಸುತೇಶ್ ನೇತೃತ್ವದಲ್ಲಿ ಅಲ್ಲಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬಾಲಕನೋರ್ವ ಪರ್ಲಿಯಾ ಸಮೀಪ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿರುವುದು ಕಂಡುಬಂದಿದ್ದು, ಆತನನ್ನು ವಿಚಾರಿಸಿದಾಗ ಅಪ್ತಾಪ್ತ ವಯಸ್ಕನಾಗಿದ್ದು, ಲೈಸನ್ಸ್ ಇಲ್ಲದಿರುವುದು ತಿಳಿದಿತ್ತು.ಈ ಕುರಿತು ಪ್ರಕರಣ ದಾಖಲಾಗಿದ್ದು, ಬಳಿಕ ಬಾಲಕನ ತಂದೆ ಸಮೀರ್ ಎಂಬವರಿಗೆ ಬಂಟ್ವಾಳ ಜೆಎಂಎಫ್ ಸಿ ಕೋರ್ಟಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನಿಯಮ ಉಲ್ಲಂಘಿಸಿದ್ದಕ್ಕಾಗಿ 26 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಮಕ್ಕಳ ಕೈಗೆ ಸ್ಕೂಟರ್ ಕೊಟ್ಟರೆ ಫೈನ್ ಬೀಳುವುದು ಖಚಿತ ಎಂದು ರಸ್ತೆ ಸುರಕ್ಷತಾ ಸಪ್ತಾಹ ಸಹಿತ ಹಲವು ಬಾರಿ ಪೊಲೀಸರು ಎಚ್ಚರಿಕೆ ನೀಡುತ್ತಾ ...