Mangalore,udupi, ಮಾರ್ಚ್ 6 -- Mangalore Metro: ಕರಾವಳಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ಮತ್ತು ಉಡುಪಿ ಮಧ್ಯೆ ಸುಮಾರು 64 ಕಿ.ಮೀ. ಉದ್ದದ ದಾರಿಯಲ್ಲಿ ಮೆಟ್ರೋ ರೈಲು ಸಂಪರ್ಕ ಸಾಧ್ಯವೇ ಎಂಬ ಕುರಿತು ತಾಂತ್ರಿಕ ಹಾಗೂ ಆರ್ಥಿಕ ಅಧ್ಯಯನ ನಡೆಸಲು ಸರಕಾರ ಮುಂದಾಗಿದೆ. ಬೆಂಗಳೂರು ಮೆಟ್ರೊ ನಿಗಮಕ್ಕೆ ಈ ಕುರಿತು ಸೂಚನೆ ನೀಡಲಾಗಿದ್ದು, ಕಾರ್ಯಸಾಧ್ಯವೇ ಎಂಬ ಕುರಿತು ಚಿಂತನೆಗಳು ನಡೆಯುತ್ತಿವೆ. ಈ ಕುರಿತು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನದಾಸ ಹೆಗ್ಡೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದರು. ಮಂಗಳೂರು ಮಣಿಪಾಲ ಮಧ್ಯೆ ಪ್ರಮುಖ ನಗರ, ಅರೆನಗರ ಮತ್ತು ಕೈಗಾರಿಕಾ ವಲಯಗಳನ್ನು ಒಳಗೊಂಡ ಮೆಟ್ರೋ ಮಾರ್ಗವನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಾರ್ಥಿಕ ಪ್ರಗತಿ, ನಗರಾಭಿವೃದ್ಧಿಯೊಂದಿಗೆ ಸಾರಿಗೆ ವ್ಯವಸ್ಥೆಯೂ ಸುಲಲಿತವಾಗಬಹುದು ಎಂದವರು ತಿಳಿಸಿದ್ದಾರೆ.

ಈಗಿರುವ ಸಾರಿಗೆ ವ್ಯವಸ್ಥೆ ದಟ್ಟಣೆಯಿಂದ ಕೂಡಿದೆ. ರಸ್ತೆ ಮಾರ್ಗವನ್ನೇ ಅವಲಂಬಿಸಿದರೆ, ...