Mangalore, ಮಾರ್ಚ್ 3 -- Mangalore Market: ಹಕ್ಕಿ ಜ್ವರವೆಂದು ಮಂಗಳೂರಿನ ತರಕಾರಿ ಧಾರಣೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಿಲ್ಲ. ಇನ್ನು, ರಮ್ಝಾನ್ ಉಪವಾಸ ಆರಂಭಗೊಂಡ ಕಾರಣ ಹಣ್ಣಿನ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ಅದರಲ್ಲೂ ದಾಳಿಂಬೆ ಹಣ್ಣಿನ ಧಾರಣೆ ಜಾಸ್ತಿಯಾಗುತ್ತಿದೆ. ತರಕಾರಿ ಬೆಲೆ ಸ್ಥಿರವಿದೆ. ಹಕ್ಕಿಜ್ವರ ಭೀತಿಯ ಕಾರಣದಿಂದ ಕೋಳಿಮಾಂಸ ತಿನ್ನುವವರ ಸಂಖ್ಯೆ ಕಡಿಮೆಯಾಗಿದ್ದು, ಮಾಂಸದ ದರದಲ್ಲಿ ಕೊಂಚ ಕಡಿಮೆಯಾಗಿದೆ. ಮಾರಾಟದ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವೇನೂ ಆಗಿಲ್ಲ. ಆದರೆ ತರಕಾರಿ ದರ ಸ್ತಿರವಾಗಿದೆ. ಮಂಗಳೂರು ಮಾರುಕಟ್ಟೆಯಲ್ಲಿ ತರಕಾರಿ/ಹಣ್ಣು: ಕೆಜಿಗೆ ದರಪಟ್ಟಿ ಹೀಗಿದೆ. ಬೀನ್ಸ್ - 60, ಬದನೆಕಾಯಿ: 45, ಬೆಂಡೆಕಾಯಿ (ಊರಿನ) - 130, ಬೆಂಡೆಕಾಯಿ (ಘಟ್ಟದ) - 50, ಟೊಮೆಟೊ - 20 ರೂ , ತೊಂಡೆಕಾಯಿ: 60 ರೂ., ಕ್ಯಾರೆಟ್ - 45 ರೂ., ನುಗ್ಗೆಕಾಯಿ - 110 ರೂ., ಬೀಟ್ ರೂಟ್ - 45 ರೂ, ಹೀರೆಕಾಯಿ: - 60 ರೂ., ಕುಂಬಳಕಾಯಿ: -30 ರೂ., ಕಲ್ಲಂಗಡಿ - 25 ರೂ., ಕದಳಿ ಬಾಳೆಹಣ್ಣು - 90 ರೂ., ದಾಳ...