ಭಾರತ, ಫೆಬ್ರವರಿ 19 -- ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯನ್ನು ಬಹಳ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಗ್ರಹಗಳು ಕಾಲ ಕಾಲಕ್ಕೆ ತಮ್ಮ ರಾಶಿ ಹಾಗೂ ನಕ್ಷತ್ರವನ್ನು ಬದಲಿಸುತ್ತವೆ. ಇದು ಆಯಾ ರಾಶಿಯವರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ಏಪ್ರಿಲ್ ತಿಂಗಳಲ್ಲಿ ಮಂಗಳನು ತನ್ನ ನಕ್ಷತ್ರವನ್ನು ಬದಲಿಸುತ್ತದೆ.

ಏಪ್ರಿಲ್ 12 ರಂದು ಬೆಳಿಗ್ಗೆ 6.32ಕ್ಕೆ ಮಂಗಳ ಗ್ರಹವು ಪುಷ್ಯ ನಕ್ಷತ್ರಕ್ಕೆ ಪ್ರವೇಶಿಸುತ್ತದೆ. ಮೇ 12, 2025 ರಂದು ಬೆಳಿಗ್ಗೆ 8:55 ರವರೆಗೆ ಅದೇ ನಕ್ಷತ್ರದಲ್ಲಿರುತ್ತದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಬಹುದು. ಈ ರಾಶಿಯವರ ಸಂಪತ್ತಿನಲ್ಲಿ ಅಪಾರ ಹೆಚ್ಚಳ ಉಂಟಾಗಬಹುದು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ನೋಡಿ.

ಮಂಗಳ ಗ್ರಹದ ನಕ್ಷತ್ರ ಬದಲಾವಣೆಯು ವೃಶ್ಚಿಕ ರಾಶಿಯವರಿಗೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಉದ್ಯಮಿಗಳ ಲಾಭ ಹೆಚ್ಚಾಗುತ್ತದೆ, ಇದು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಸ್ವಂತ ಅಂಗಡಿಗ...