Mysuru, ಫೆಬ್ರವರಿ 4 -- ಮನಸ್ಸಿನಲ್ಲಿ ಮೊಳಕೆ ಮೂಡಿದ ಕನಸೊಂದು ಮೊದಲ ಹೆಜ್ಜೆಯಾಗಿದ್ದು ಸರಿಯಾಗಿ ಇಪ್ಪತ್ತೆರಡು ವರ್ಷಗಳ ಹಿಂದಿನ ದಿನದಂದು 02.02.2002 'ನಟನ' ಸಂಸ್ಥೆ ನೋಂದಾಯಿತ ಸಂಸ್ಥೆಯಾಗಿ ಅಧಿಕೃತವಾಗಿ ಕೆಲಸ ಆರಂಭಿಸಿದ ದಿನ. ಆ ರಿಜಿಸ್ಟ್ರೇಷನ್ ಪತ್ರದ ಡೇಟ್ ನೋಡಿ ಅಚ್ಚರಿಯೊಂದಿಗೆ ಮನಸ್ಸಿನಲ್ಲಿ ಸಣ್ಣ ನಗೆ, ಸಂಭ್ರಮದ ಜತೆಗೆ ಮನ ಮೆಲುಕು ಹಾಕಲಾರಂಭಿಸಿತು. ನೆನಪಿನ ಸಾಗರದ ನೌಕೆಯ ನಾವಿಕ ನಾನೀಗ...

ನಾಗಮಂಗಲ - ಮಂಡ್ಯ-ನೀನಾಸಂ- ರಂಗಾಯಣ-ಸಿನಿಮಾ -ಟಿವಿ-ಧಾರಾವಾಹಿ-ಸಾಕ್ಷ್ಯಚಿತ್ರ- ಜಾಹೀರಾತು ಅಭಿನಯ.. ನಲ್ವತ್ತಮೂರು ವರ್ಷಗಳ ರಂಗಯಾನ,

ಇಪ್ಪತ್ತೆಂಟು ವರ್ಷಗಳ ಸಿನಿಮಾ ಯಾನದೊಂದಿಗೆ... 'ನಟನ'ಕ್ಕೆ ಈ ವರ್ಷ ಇಪ್ಪತ್ತೆರಡನೇ ವರ್ಷದ ಸಡಗರ. 2002 ನನ್ನ ಪಾಲಿಗೆ ಸ್ವಲ್ಪ ವಿಶೇಷವೇ.

ಪ್ರಪಂಚವನ್ನು ಕಾಡಿದ ಎರಡೂ ಲಾಕ್ಡೌನ್ಗಳಲ್ಲಿ ಕೂಡ ಆನ್ಲೈನ್ ರಂಗ ತರಬೇತಿ ಶಿಬಿರ ಮಾಡಿದೆವೇ ಹೊರತು ಚಟುವಟಿಕೆಯನ್ನು ಪೂರ್ಣ ನಿಲ್ಲಿಸಲಿಲ್ಲ!

ನಟನ ಶುರುವಾದ ಮೊದಲ ವರ್ಷದಿಂದ ಈ ಅಷ್ಟೂ ವರ್ಷಗಳಲ್ಲಿ

ಒಂದೇ ಒಂದು ವರ್ಷವೂ ಹೊಸ ನಾಟಕ...