ಭಾರತ, ಮಾರ್ಚ್ 28 -- ಯುವ ಮನಸ್ಸುಗಳನ್ನು ಅರ್ಥ ಮಾಡಿಕೊಂಡು, ಅವರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುವವರ ಪೈಕಿ ಯೋಗರಾಜ್ ಭಟ್ ಪ್ರಮುಖರು. ಅವರ ಹೊಸ ಚಿತ್ರ 'ಮನದ ಕಡಲು' ಸಹ ಅಂತಹ ಪ್ರಯತ್ನಗಳಲ್ಲೊಂದು. ಇವತ್ತಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಿರುವ ಯೋಗರಾಜ್‍ ಭಟ್‍, ಈ ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದಾರೆ? ಮುಂದೆ ಓದಿ

ಸುಮುಖ ಒಬ್ಬ ಮೆಡಿಕಲ್‍ ವಿದ್ಯಾರ್ಥಿ. ಒಂದು ದುರ್ಘಟನೆಯ ನಂತರ ವೈದ್ಯಕೀಯ ವೃತ್ತಿ ಬಗ್ಗೆ ತಿರಸ್ಕಾರ ಬಂದು ಓದುವುದನ್ನೇ ನಿಲ್ಲಿಸುತ್ತಾನೆ. ಹೀಗಿರುವಾಗಲೇ ರಾಶಿಕಾ ಎಂಬ ಕ್ರಿಕೆಟ್‍ ಆಟಗಾರ್ತಿಯ ಮೇಲೆ ಮೊದಲ ನೋಟದಲ್ಲೇ ಅವನಿಗೆ ಪ್ರೀತಿಯಾಗುತ್ತದೆ. ಆರು ತಿಂಗಳ ನಂತರ ನೋಡೋಣ ಎಂದು ಹೇಳಿಕಳುಹಿಸುವ ಅವಳು, ಆರು ತಿಂಗಳು ಮುಗಿಯುವುದರೊಳಗೆ ಮಾಯವಾಗಿರುತ್ತಾಳೆ. ಅವಳನ್ನು ಹುಡುಕಿಕೊಂಡು ದೋಣಿದುರ್ಗ ಎಂಬ ಊರಿಗೆ ಹೋಗುವ ಸುಮುಖನಿಗೆ ಅಂಜಲಿ ಎಂಬ ಇನ್ನೊಂದು ಹುಡುಗಿಯ ಪರಿಚಯವಾಗುತ್ತಾಳೆ. ಸುಮುಖನಿಗೆ ರಾಶಿಕಾಳ ಮೇಲೆ ಪ್ರೀತಿಯಾದರೆ, ಅಂಜಲಿಗೆ ಸುಮುಖನ ಮೇಲೆ ಪ...