Kerala, ಜನವರಿ 27 -- ಮೈಸೂರು: ಕರ್ನಾಟಕ ಹಾಗೂ ಕೇರಳದ ಗಡಿ ಭಾಗದಲ್ಲಿ ನರಭಕ್ಷಕ ಹುಲಿಯ ಉಪಟಳ ಜೋರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪತ್ನಿಯನ್ನು ಕೊಂದು ಹಾಕಿದ ಹುಲಿ ಆಕೆಯ ದೇಹದ ಭಾಗವನ್ನು ತಿಂದು ಹಾಕಿದೆ. ಹುಲಿ ಹಿಡಿಯಲು ಹೋದ ಕಾರ್ಯಪಡೆ ಸಿಬ್ಬಂದಿ ಮೇಲೂ ದಾಳಿ ಮಾಡಿದೆ. ಹುಲಿ ಉಪಟಳದಿಂದ ಪ್ರತಿಭಟನೆಗಳು ತೀವ್ರಗೊಂಡಿವೆ. ಹುಲಿಯನ್ನು ಸೆರೆ ಹಿಡಿಯಬೇಕು. ಈ ಭಾಗದಲ್ಲಿ ಮಿತಿ ಮೀರಿರುವ ವನ್ಯಜೀವಿಗಳ ಹಾವಳಿ ತಗ್ಗಿಸಲು ತುರ್ತು ಕ್ರಮ ವಹಿಸಬೇಕು ಎನ್ನುವ ಬೇಡಿಕೆಯೊಂದಿಗೆ ಕೇರಳ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿರುವ ಮಾನಂದವಾಡಿಯ ಜನ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅದೂ ಕೇರಳದ ಅರಣ್ಯ ಸಚಿವರ ಕಾರಿಗೆ ಘೇರಾವ್‌ ಹಾಕಿ ಮುಂದೆ ಹೋಗಲು ಅವಕಾಶ ನೀಡದೇ ಆಕ್ರೋಶ ಹೊರ ಹಾಕಿದ್ದಾರೆ. ಈ ಕಾರಣದಿಂದ ಸೋಮವಾರದಿಂದ ಎರಡು ದಿನಗಳ ಕಾಲ ಮಾನಂದವಾಡಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕರ್ನಾಟಕದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ವಯನಾಡು ಜಿಲ್ಲೆಯಲ್ಲಿ ಹುಲಿ ಗದ್ದಲ ಮೂರು ದಿನದಿಂದ ಜೋರ...