ಭಾರತ, ಮಾರ್ಚ್ 17 -- ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಆರೋಗ್ಯಕ್ಕೆ ಸಂಬಂಪಟ್ಟಂತೆ ನಿನ್ನೆಯಿಂದ ಹಲವು ವದಂತಿ ಹರಿದಾಡುತ್ತಿದ್ದವು. ಮಮ್ಮುಟ್ಟಿಗೆ ಕ್ಯಾನ್ಸರ್‌ ಅಂತೆ.. ಗಂಭೀರ ಸ್ಥಿತಿಯಲ್ಲಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರಂತೆ... ಈ ಎಲ್ಲಾ ವದಂತಿ ಕುರಿತು ಮಮ್ಮುಟ್ಟಿ ಅವರ ಪಿಆರ್‌ ತಂಡವು ಸ್ಪಷ್ಟನೆ ನೀಡಿದೆ. "ಈ ಎಲ್ಲಾ ವದಂತಿ ಸುಳ್ಳು, ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ. ಸದ್ಯ ರಮಝಾನ್‌ ಇರುವುದರಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ" ಎಂದು ಮಮ್ಮುಟ್ಟಿ ಅವರ ಪಿಆರ್‌ ತಂಡವು ಸ್ಪಷ್ಟಪಡಿಸಿದೆ.

ಮಮ್ಮುಟ್ಟಿ ಕ್ಯಾನ್ಸರ್‌ ಪೀಡಿತರಾಗಿದ್ದು, ಇದೇ ಕಾರಣಕ್ಕೆ ಶೂಟಿಂಗ್‌ಗೆ ಬರುತ್ತಿಲ್ಲ. ಅವರ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಈ ವದಂತಿ ಅವರ ಅಪಾರ ಅಭಿಮಾನಿಗಳಿಗೆ ಆಘಾತ ತಂದಿತ್ತು. ರೆಡ್ಡಿಟ್‌ ಜಾಲತಾಣದಲ್ಲಿ "ಮಮ್ಮುಟ್ಟಿ ಅವರಿಗೆ ಕರುಳಿನ ಕ್ಯಾನ್ಸರ್‌ ಇದೆ. ಈಗ ಆರಂಭಿಕ ಹಂತದಲ್ಲಿದೆ" ಎಂಬ ಪೋಸ್ಟ್‌ ಯ...