ಭಾರತ, ಏಪ್ರಿಲ್ 6 -- Mallu Jamkhandi Comedy: ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕಾಮಿಡಿ ವಿಡಿಯೋ ಮೂಲಕವೇ ಸಖತ್‌ ಫೇಮಸ್‌ ಆಗಿರುವ ಉತ್ತರ ಕರ್ನಾಟಕದ ಮಲ್ಲು ಜಮಖಂಡಿ, ಸಿನಿಮಾ ನಟನಾಗಿಯೂ ಬೆಳೆದಿದ್ದಾರೆ. ಟಿಕ್‌ಟಾಕ್‌ ಮೂಲಕ ಆರಂಭವಾದ ಇವರ ಈ ಜರ್ನಿ ಇದೀಗ, ಸುದೀರ್ಘ ಹಾದಿ ಸವೆಸಿ ಮುಂದೆ ಸಾಗಿದೆ. Mallu Jamakhandi ಹೆಸರಿನ ಯೂಟ್ಯೂಬ್‌ನಲ್ಲಿ ಕಾಮಿಡಿ ಕಿರುಚಿತ್ರಗಳಿಂದ ಗುರುತಿಸಿಕೊಂಡು, ಲಕ್ಷ ಲಕ್ಷ ಸಬ್‌ಸ್ಕ್ರೈಬರ್ಸ್‌ ಸಂಪಾದಿಸಿರುವ ಮಲ್ಲು, ಚಂದನವನಕ್ಕೆ ನಾಯಕನಾಗಿಯೂ ಎಂಟ್ರಿಕೊಟ್ಟು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗೆ ನೇಮು ಫೇಮು ಹೆಚ್ಚುತ್ತ ಹೋದಂತೆ, ಬೇಡದ ಸಮಸ್ಯೆಗಳೂ ಇವರ ಬೆನ್ನು ಬಿದ್ದಿವೆ. ಆ ಬಗ್ಗೆ ವಿಶೇಷ ಮನವಿಯ ವಿಡಿಯೋ ಹಂಚಿಕೊಂಡಿದ್ದಾರವರು.

ಯೂಟ್ಯೂಬರ್‌ ಮಲ್ಲು ಜಮಖಂಡಿ ಅವರ ಹೆಸರನ್ನು ಬಳಸಿಕೊಂಡು, ಅವರ ಹೆಸರಿನಲ್ಲಿಯೇ ಸೋಷಿಯಲ್‌ ಮೀಡಿಯಾ ಅಕೌಂಟ್‌ ತೆರೆದು ಹುಡುಗಿಯರಿಗೆ ಮೆಸೆಜ್‌ ಮಾಡಲಾಗುತ್ತಿದೆ. ಮೆಸೆಜ್‌ ಜತೆಗೆ ಪ್ರೀತಿ ಪ್ರೇಮದ ಬಲೆಯಲ್ಲಿಯೂ ಯುವತಿಯರನ್ನು ಬೀಳಿಸುವ ನೀಚ ಕೆಲಸ ನ...