ಭಾರತ, ಫೆಬ್ರವರಿ 8 -- ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿದೆ. ಒತ್ತಡದ ಕೆಲಸ ಮತ್ತು ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಅನೇಕ ಜನರು ತಮ್ಮ ಆರೋಗ್ಯದ ಕಡೆ ಸರಿಯಾದ ಗಮನ ಹರಿಸುವುದಿಲ್ಲ. ಈಗ ಆಹಾರ ಪದ್ಧತಿಯಲ್ಲೂ ಭಾರಿ ಬದಲಾವಣೆಯಾಗಿದೆ. ಈ ಕಳಪೆ ಆಹಾರ ಪದ್ಧತಿಗಳ ಪರಿಣಾಮವು ಒಟ್ಟಾರೆ ಆರೋಗ್ಯದ ಮೇಲೆ, ವಿಶೇಷವಾಗಿ ಫಲವಂತಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹಲವರು ಹೇಳುತ್ತಾರೆ. ಇದಕ್ಕೆ ಕೆಲವು ಆರೋಗ್ಯ ಸಮಸ್ಯೆಗಳು ಕಾರಣವಾದರೂ, ಆಹಾರ ಪದ್ಧತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆಯಾದರೆ, ಅದು ಮಗು ಪಡೆಯಲು ತೊಂದರೆ ಉಂಟು ಮಾಡಬಹುದು.

ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಅನೇಕ ಕಾರಣಗಳಿವೆ. ಇವುಗಳಲ್ಲಿ ಧೂಮಪಾನ, ಮದ್ಯಪಾನ, ಮಾದಕ ವ್ಯಸನ, ಬೊಜ್ಜು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿವೆ. ಇದರೊಂದಿಗೆ, ಆಹಾರವು ಪುರುಷರ ವೀರ್ಯಾಣುಗ...