Bengaluru, ಫೆಬ್ರವರಿ 24 -- Upcoming Malayalam Movies: 2025ರ ಆರಂಭದಿಂದಲೂ ಮಲಯಾಳಂನಲ್ಲಿ ಒಂದಾದ ಮೇಲೊಂದು ಒಳ್ಳೊಳ್ಳೆ ಸಿನಿಮಾಗಳು ರಿಲೀಸ್‌ ಆಗುತ್ತಲೇ ಇವೆ. ವರ್ಷದ ಆರಂಭದಲ್ಲಿ ಆಸಿಫ್ ಅಲಿಯವರ ರೇಖಾಚಿತ್ರಂ ಸಿನಿಮಾ ಮತ್ತು ಬಾಸಿಲ್ ಜೋಸೆಫ್ ಅವರ ಪೊನ್ಮನ್, ಕುಂಚಾಕೊ ಬೋಬನ್ ಅಭಿನಯದ ಆಫೀಸರ್ ಆನ್ ಡ್ಯೂಟಿ, ಮಮ್ಮುಟ್ಟಿ ಅವರ "ಡೊಮಿನಿಕ್ ಅಂಡ್‌ ದಿ ಲೇಡೀಸ್ ಪರ್ಸ್" ಸೇರಿ ಸಾಲು ಸಾಲು ಸಿನಿಮಾಗಳು ಹಿಟ್‌ ಪಟ್ಟಿ ಸೇರುವುದರ ಜತೆಗೆ ಒಟಿಟಿ ವೀಕ್ಷಕರ ಕಣ್ಣರಳಿಸಿವೆ. ಅದ್ಯಾವಾಗ ಈ ಸಿನಿಮಾಗಳು ಒಟಿಟಿಗೆ ಬರಲಿವೆ ಎಂದು ಕಾಯುತ್ತಿದ್ದಾರೆ. ಈ ಬಹುನಿರೀಕ್ಷಿತ ಮಲಯಾಳಂ ಸಿನಿಮಾಗಳ ಒಟಿಟಿ ಬಿಡುಗಡೆ ಕುರಿತ ಮಾಹಿತಿ ಇಲ್ಲಿದೆ.

ವೀಕ್ಷಣೆ - ಸೋನಿಲಿವ್

OTT ಬಿಡುಗಡೆ ದಿನಾಂಕ - ಮಾರ್ಚ್ 7, 2025

ಕಿಷ್ಕಿಂಧಾ ಕಾಂಡಂ ಚಿತ್ರದ ಯಶಸ್ಸಿನ ನಂತರ, ಆಸಿಫ್ ಅಲಿ ರೇಖಾಚಿತ್ರಂ ಜೊತೆ ಆಗಮಿಸಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರಿಬ್ಬರನ್ನೂ ಮೆಚ್ಚಿಸಿದ ಈ ಸಿನಿಮಾ, 1980ರ ದಶಕದಲ್ಲಿ ನಟಿಯೊಬ್ಬಳು ಕಾಣೆಯಾಗುತ್ತಾಳೆ. ಆಕೆಗೆ ಏನ...