Bengaluru, ಫೆಬ್ರವರಿ 24 -- ಮಾರ್ಚ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.

ಡೊಮಿನಿಕ್ ಅಂಡ್‌ ದಿ ಲೇಡೀಸ್ ಪರ್ಸ್: ಡೊಮಿನಿಕ್ ಅಂಡ್‌ ದಿ ಲೇಡೀಸ್ ಪರ್ಸ್ ಮಮ್ಮುಟ್ಟಿ ಅವರ ಈ ವರ್ಷದ ಮೊದಲ ಸಿನಿಮಾ. ಗೌತಮ್ ವಾಸುದೇವ್ ಮೆನನ್ ಅವರ ಚೊಚ್ಚಲ ಮಲಯಾಳಂ ನಿರ್ದೇಶನದ ಸಿನಿಮಾ ಎಂಬ ವಿಶೇಷಣದ ಜತೆಗೆ ಬಿಡುಗಡೆ ಆಗಿತ್ತು. ಈ ಚಿತ್ರವು ಪತ್ತೇದಾರಿ ಕತೆಯ ಹಿನ್ನೆಲೆಯಲ್ಲಿ ತೆರೆದುಕೊಳ್ಳಲಿದೆ. ಮಮ್ಮುಟ್ಟಿ ಅಭಿನಯದ ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾದಾಗ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸದ್ಯ ಈ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ.

ರೇಖಾಚಿತ್ರಂ: ಕಿಷ್ಕಿಂಧಾ ಕಾಂಡಂ ಚಿತ್ರದ ಯಶಸ್ಸಿನ ನಂತರ, ಆಸಿಫ್ ಅಲಿ ರೇಖಾಚಿತ್ರಂ ಜೊತೆ ಆಗಮಿಸಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರಿಬ್ಬರನ್ನೂ ಮೆಚ್ಚಿಸಿದ ಈ ಸಿನಿಮಾ, 1980ರ ದಶಕದಲ್ಲಿ ನಟಿಯೊಬ್ಬಳು ಕಾಣೆಯಾಗುತ್ತಾಳೆ. ಆಕೆಗೆ ಏನಾಯ್ತು ಎಂದು ಹುಡುಕುವ ತನಿಖಾ ಥ್ರಿಲ್ಲರ್‌ ಸಿನಿಮಾ ಈ ರೇಖಾಚಿತ್ರಂ. ಪೊಲೀಸ್ ಅಧ...