Bengaluru, ಮಾರ್ಚ್ 21 -- Female- Led Malayalam Movies: ಮಹಿಳಾ ಪ್ರಧಾನ ಸಿನಿಮಾಗಳು ಕೇವಲ ಪ್ರೇಕ್ಷಕರ ಹೃದಯವನ್ನಷ್ಟೇ ಗೆಲ್ಲುತ್ತಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಕಮರ್ಷಿಯಲ್‌ ಆಗಿ ಹಿಟ್‌ ಸಹ ಆಗುತ್ತಿವೆ. ಒಂದಷ್ಟು ಸಿನಿಮಾಗಳು ಹಳೇ ಕಟ್ಟುಪಾಡುಗಳನ್ನು ದಾಟಿ, ಹೊಸ ದಾಖಲೆ ಬರೆದಿವೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್‌ ಪಟ್ಟಿಗೆ ಸೇರಿವೆ ಹಲವು ಸಿನಿಮಾಗಳು. ಆ ಪೈಕಿ ಮಲಯಾಳಂನಲ್ಲಿನ ಟಾಪ್‌ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಆಸಿಡ್ ದಾಳಿಯನ್ನು ಜಯಿಸಿ ತನ್ನ ಕನಸುಗಳನ್ನು ಮರಳಿ ಪಡೆಯುವ ಮಹತ್ವಾಕಾಂಕ್ಷೆಯ ಪೈಲಟ್ ಪಲ್ಲವಿ ಪಾತ್ರದಲ್ಲಿ ಪಾರ್ವತಿ ತಿರುವೋತ್ತು ಗಟ್ಟಿ ಅಭಿನಯ ನೀಡಿದ್ದಾರೆ. ವಿಮರ್ಶಾತ್ಮಕ ಮತ್ತು ಕಮರ್ಶಿಯಲ್‌ ಆಗಿ ಮೆಚ್ಚುಗೆ ಪಡೆದ ಈ ಸಿನಿಮಾ ಮಹಿಳಾ ಸಬಲೀಕರಣ ಸಂದೇಶವನ್ನೂ ಪ್ರೇಕ್ಷಕರತ್ತ ದಾಟಿಸಿದೆ. ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಲಭ್ಯವಿದೆ.

ಇದನ್ನೂ ಓದಿ: ಕನ್ನಡ ಕಿರುತೆರೆಯ ನಾನ್‌ ಫಿಕ್ಷನ್‌ನಲ್ಲಿ ಯಾರು ಟಾಪರ್‌? ಹೀಗಿದೆ ರಿಯಾಲಿಟಿ ಶೋ...