ಭಾರತ, ಏಪ್ರಿಲ್ 11 -- Bad Boyz out on OTT: ಈ ವೀಕೆಂಡ್‌ನಲ್ಲಿ ಮಲಯಾಳಂ ಆಕ್ಷನ್‌ ಕಾಮಿಡಿ ಸಿನಿಮಾ ನೋಡಲು ಬಯಸುವವರಿಗೆ ಸಿನಿಮಾವೊಂದು ಕಾಯುತ್ತಿದೆ. ಒಮರ್ ಲುಲು ನಿರ್ದೇಶನದ ಬ್ಯಾಡ್ ಬಾಯ್ಜ್ ಚಿತ್ರವು ಸೆಪ್ಟೆಂಬರ್ 2024 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ರೆಹಮಾನ್ ಮತ್ತು ಬಾಬು ಆಂಟನಿ ನಟಿಸಿರುವ ಈ ಮಲಯಾಳಂ ಚಿತ್ರವು ಅಂತಿಮವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಮಲಯಾಳಂ ಆಕ್ಷನ್ ಹಾಸ್ಯ ಚಿತ್ರವು ಈಗ ಎರಡು ವೇದಿಕೆಗಳಲ್ಲಿ ಲಭ್ಯವಿದೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಮನೋರಮಾ ಮ್ಯಾಕ್ಸ್‌ನಲ್ಲಿ ಇದೀಗ ರಿಲೀಸ್‌ ಆಗಿದೆ.

ಒಮರ್ ಲುಲು ನಿರ್ದೇಶನದ ಬ್ಯಾಡ್ ಬಾಯ್ಜ್ ಚಿತ್ರವು ಬಿಡುಗಡೆಯಾಗಿ ಆರು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತರ ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ನೀವು ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ಮನೋರಮಾ ಮ್ಯಾಕ್ಸ್‌ನಲ್ಲಿ ಬ್ಯಾಡ್ ಬಾಯ್ಜ್ ಸಿನಿಮಾ ನೋಡಬಹುದು. ಈ ಚಿತ್ರವು ಮೂಲ ಮಲಯಾಳಂ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಈ ಚಿತ್ರವನ್ನು ಇತರೆ ಭಾಷಿಕರು ಇಂಗ್ಲಿಷ್‌ ಸಬ್‌ಟೈ...