Bangalore, ಮಾರ್ಚ್ 18 -- Malaika Arora: ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಜಡ್ಜ್‌ಗಳನ್ನು ಇಂಪ್ರೆಸ್‌ ಮಾಡಲು ನಾನಾ ಪ್ರಯತ್ನ ಮಾಡುತ್ತಾರೆ. ಇವರ ಕೆಲವೊಂದು ಪ್ರಯತ್ನಗಳು ವೀಕ್ಷಕರಿಗೆ ಮಾತ್ರವಲ್ಲದೆ ಶೋನ ಸ್ಪರ್ಧಿಗಳಿಗೂ ಮುಜುಗರ ತರಿಸುತ್ತವೆ. ಇದೇ ರೀತಿಯ ಅನುಭವ ನಟಿ ಮಲ್ಲಿಕಾ ಅರೋರಾ ಅವರಿಗೂ ಆಗಿದೆ. ಹಿಪ್‌ ಹೊಪ್‌ ಇಂಡಿಯಾ ಸೀಸನ್‌ 2 (Hip Hop India Season 2) ನಲ್ಲಿ 16 ವರ್ಷ ವಯಸ್ಸಿನ ಬಾಲಕನಿಗೆ ನಟಿ ಮಲೈಕಾ ಅರೋರಾ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸ್ಪರ್ಧಿಯ ಅಸೂಕ್ಷ್ಮ ನಡವಳಿಕೆಯನ್ನು ಗುರುತಿಸಿದ ನಟಿ ತಕ್ಷಣ ಕೋರಿಯೋಗ್ರಾಫರ್‌-ನಿರ್ದೇಶಕರಾದ ರೆಮೊ ಡಿಸೋಜಾರತ್ತ ಬೇಸರದಿಂದ ನೋಡಿದರು. ಬಳಿಕ ಸ್ಪರ್ಧಿಯನ್ನು ಕರೆದು ಕ್ಲಾಸ್‌ ತೆಗೆದುಕೊಂಡರು.

ಹಿಪ್‌ ಹೊಪ್‌ ಇಂಡಿಯಾ ಸೀಸನ್‌ 2ನ ಈ ಶೋ ಎಂಎಕ್ಸ್‌ ಪ್ಲೇಯರ್‌ನಲ್ಲಿ ಮಾರ್ಚ್‌ 14ರಂದು ಪ್ರಸಾರವಾಗಿದೆ. ಈ ಶೋನಲ್ಲಿ ಮಲೈಕಾ ಅರೋರಾ ತನ್ನ ಕೋಪವನ್ನು ನಿಯಂತ್ರಿಸಿ ಸ್ಪರ್ಧಿಗೆ "ಇದು ಸರಿಯಾ" ಎಂದು ಕೇಳಿದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ...