ಭಾರತ, ಮಾರ್ಚ್ 29 -- ಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್‌ ಈ ವಾರದ ಸಂಚಿಕೆ ಉತ್ತಮವಾಗಿ ಮೂಡಿ ಬಂದಿದೆ.

ಈ ವಾರ ಬಿಡುಗಡೆಯಾದ ಮನದ ಕಡಲು ಸಿನಿಮಾ ತಂಡ ಮಜಾ ಟಾಕೀಸ್‌ನಲ್ಲಿ ಮಜಾ ಮಾಡಿದೆ.

ಮಿಮಿಕ್ರಿ ಗೋಪಿ ರಂಗಾಯಣ ರಘು ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಸ್ವತಃ ರಂಗಾಯಣ ರಘು ಅವರೇ ಮೆಚ್ಚಿದ್ದಾರೆ.

ಒಮ್ಮೆ ರಂಗಾಯಣ ರಘು ಇನ್ನೊಮ್ಮೆ ದತ್ತಣ್ಣನ ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲಿ ಕುಳಿತು ವೀಕ್ಷಿಸುತ್ತಿದ್ದವರೆಲ್ಲರೂ ದಂಗಾಗಿದ್ದಾರೆ.

ನಂತರ ಮನದ ಕಡಲು ತಂಡದೊಂದಿಗೆ ಡಾನ್ಸ್‌ ಮಾಡಿದ್ದಾರೆ. ಕಲರ್ಸ್ ಕನ್ನಡ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದೆ,

ಆಹಾ! ಎಂತಾ ಘಟಾನುಘಟಿ ಕಲಾವಿದರು, ರಂಗಭೂಮಿಯ ಕೀರ್ತಿ ಪತಾಕೆಯನ್ನು ಮಜಾ ಟಾಕೀಸ್‌ನಲ್ಲಿ ಹಾರಿಸಿದ ಇವರಿಬ್ಬರಿಗೂ ಒಳ್ಳೆಯದಾಗಲಿ ಎಂಬ ಕಾಮೆಂಟ್‌ಗಳು ಬರುತ್ತಿದೆ.

ಮಿಮಿಕ್ರಿ ಗೋಪಿ ಮತ್ತು ರಂಗಾಯಣ ರಘು ಅವರಿಬ್ಬರನ್ನೂ ಒಂದೇ ಫ್ರೇಮಿನಲ್ಲಿ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ.

Published by HT Digital Cont...