Bengaluru, ಫೆಬ್ರವರಿ 19 -- ಸದ್ಗುರು ಜಗ್ಗಿ ವಾಸುದೇವ್ ಬರಹ: ಭಾರತದ ಸಂಸ್ಕೃತಿ ಬಹಳ ವೈವಿಧ್ಯವಾದುದು. ಒಂದು ಕಾಲದಲ್ಲಿ ಇಲ್ಲಿ ವರ್ಷಪೂರ್ತಿ ಹಬ್ಬಗಳು ನಡೆಯುತ್ತಿದ್ದವಂತೆ. ವಿಭಿನ್ನ ಕಾರಣಗಳನ್ನು ಹೇಳಿ ಇಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಐತಿಹಾಸಿಕ ದಿನಗಳು, ಉತ್ಸವ, ಪರ್ವಕಾಲಗಳು, ಬಿತ್ತನೆ, ನಾಟಿ, ಕೊಯ್ಲು ಹಾಗೂ ಜೀವನಕ್ಕೆ ಸಂಬಂಧಪಟ್ಟ ಸನ್ನಿವೇಶ ಮುಂತಾದವುಗಳನ್ನು ಆಚರಿಸಲಾಗುತ್ತಿತ್ತು. ಆ ಪ್ರತಿಯೊಂದು ಸನ್ನಿವೇಶಗಳಿಗೂ ಅದರದೇ ಆದ ಮಹತ್ವವನ್ನು ನೀಡಿ ಬಹಳ ಉತ್ಸಾಹದಿಂದ ಹಬ್ಬದಂತೆ ಅವುಗಳನ್ನು ಆಚರಿಸುತ್ತಿದ್ದರು. ಅವುಗಳಲ್ಲಿ ಕೆಲವು ಆಧ್ಯಾತ್ಮಿಕ ಆಚರಣೆಗಳಾದರೆ ಇನ್ನು ಕೆಲವು ಪ್ರಕೃತಿ ಮಾತೆಯನ್ನು ಆರಾಧಿಸುವ ಹಬ್ಬಗಳಾಗಿದ್ದವು. ಎಲ್ಲ ಯುಗಗಳಲ್ಲಿಯೂ ದೇವರ ಕೃಪೆಗೆ ಪಾತ್ರರಾಗಲು ಆಧ್ಯಾತ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಬಹುದು. ದೇವರನ್ನು ನಿರ್ದಿಷ್ಟ ದಿನಗಳಲ್ಲಿ ವಿಭಿನ್ನವಾಗಿ ಪೂಜಿಸಲಾಗುತ್ತಿತ್ತು. ಅದೇ ರೀತಿ ಶಿವನನ್ನು ಕೂಡಾ ವಿಶೇಷ ದಿನಗಳಂದು ಪೂಜಿಸಲಾಗುತ್ತದೆ. ಈ ಸೃಷ್ಟಿಯ ...