Bengaluru, ಫೆಬ್ರವರಿ 12 -- ಶಿವ, ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬನಾದ ದೇವರು. ಪರಮೇಶ್ವರನನ್ನು ಈ ಬ್ರಹ್ಮಾಂಡದ ಲಯಕಾರಕನೆಂದೂ ಕರೆಯಲಾಗುತ್ತದೆ. ಕೈಲಾಸ ಪರ್ವತ ಇವನ ವಾಸಸ್ಥಾನ. ಶಿವನನ್ನು ಈಶ್ವರ, ಪರಮೇಶ್ವರ, ರುದ್ರ ಎಂದೆಲ್ಲಾ ಕರೆಯುತ್ತಾರೆ. ಸಾಮಾನ್ಯವಾಗಿ ಶಿವನನ್ನು ಲಿಂಗದ ರೂಪದಲ್ಲಿಯೇ ಪೂಜಿಸಲಾಗುತ್ತದೆ. ಅದು ಅವನ ಅನಂತ ಶಕ್ತಿಯ ಸಂಕೇತ. ಮತ್ತು ಶಿವನ ಸಾನಿಧ್ಯವನ್ನು ಪ್ರತಿನಿಧಿಸುತ್ತದೆ. ಶಿವ ಪುರಾಣದ ಪ್ರಕಾರ ಒಟ್ಟು 64 ಜ್ಯೋತಿರ್ಲಿಂಗಗಳಿವೆ. ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಅವುಗಳನ್ನು ಮಹಾಜ್ಯೋತಿರ್ಲಿಂಗಗಳು ಎಂದೂ ಕರೆಯಲಾಗುತ್ತದೆ. ಪ್ರತಿಯೊಂದು ಜ್ಯೋತಿರ್ಲಿಂಗವೂ ಶಿವನ ಅಪಾರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ಜ್ಯೋತಿರ್ಲಿಂಗಗಳು ಶಿವನನ್ನು ನೇರವಾಗಿ ಸಂಪರ್ಕಿಸುತ್ತವೆ ಹಾಗೂ ಸುಲಭವಾಗಿ ಅವನ ಕೃಪೆಗೆ ಪಾತ್ರರಾಗಬಹುದಾಗಿದೆ. ಭಾರತದಲ್ಲಿರುವ ಪ್ರಮುಖ 12 ಜ್ಯೋತಿರ್ಲಿಂಗಗಳಿಗೆ ಶಿವನ ಭಕ್ತರು ಭೇಟಿಕೊಡುತ್ತಾರೆ. ಶಿವನ ಆರಾಧನೆ ದಿನವಾದ ಶಿವರ...