Bangalore, ಫೆಬ್ರವರಿ 26 -- Maha Shivaratri Mantras: ಹಿಂದೂ ಧರ್ಮದಲ್ಲಿ, ಮಹಾಶಿವರಾತ್ರಿಯನ್ನು ಪ್ರತಿವರ್ಷ ಫಾಲ್ಗುಣ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಮಹಾಶಿವರಾತ್ರಿಯನ್ನು ಇಂದು (ಫೆಬ್ರವರಿ 26, ಬುಧವಾರ) ಆಚರಿಸಲಾಗುತ್ತಿದೆ. ಈ ದಿನ, ಪರಮೇಶ್ವರ ಮತ್ತು ಪಾರ್ವತಿ ದೇವಿಯನ್ನು ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಸಂತೋಷ ಹಾಗೂ ಅದೃಷ್ಟದ ಶುಭ ಫಲಗಳಿಗಾಗಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ.

ಮಹಾಶಿವರಾತ್ರಿಯ ದಿನದಂದು, ಅಪೇಕ್ಷಿತ ಫಲಗಳು, ಸಂಪತ್ತು, ಸಂತೋಷ, ಸಮೃದ್ಧಿ, ಮಕ್ಕಳ ಸಂತೋಷ, ಮದುವೆ ಹಾಗಹೂ ಉದ್ಯೋಗದಲ್ಲಿ ಬಡ್ತಿ ಪಡೆಯಲು ಮತ್ತು ರೋಗಗಳು, ದೋಷಗಳನ್ನು ತೊಡೆದುಹಾಕಲು ಕೆಲವು ವಿಶೇಷ ಮಂತ್ರಗಳನ್ನು ಪಠಿಸಲಾಗುತ್ತದೆ. ಇದನ್ನು ಮಾಡುವುದರಿಂದ, ಶಿವನು, ಜೀವನದ ಪ್ರತಿಯೊಂದು ನೋವನ್ನು ತೊಡೆದುಹಾಕುತ್ತಾನೆ. ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾನೆ ಎಂದು ಹೇಳಲಾಗುತ್ತದೆ. ಮಹಾಶಿವರಾತ್ರಿಯ ದಿನದಂದು ಪಠಿಸಬೇಕಾದ 15 ಮಂತ್ರಗಳ...