ಭಾರತ, ಫೆಬ್ರವರಿ 20 -- ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಶಿವರಾತ್ರಿಯೂ ಒಂದು. ಶಿವರಾತ್ರಿ ಸಮಯದಲ್ಲಿ ಜಾಗರಣೆ ಹಾಗೂ ಉಪವಾಸ ಆಚರಿಸುವ ಕ್ರಮ ರೂಢಿಯಲ್ಲಿದೆ. ಶಿವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ವೈದ್ಯರು ಕೂಡ ಉಪವಾಸ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಶಿವರಾತ್ರಿ ಉಪವಾಸದ ಹಿಂದಿನ ದಿನ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಡಲು ಸಹಾಯವಾಗುತ್ತದೆ.

ಉಪವಾಸ ಮಾಡುವುದರಿಂದ ದೇಹದಲ್ಲಿನ ಶಕ್ತಿ ಕುಂಠಿತವಾಗುತ್ತದೆ. ಆದರೆ ಉಪವಾಸದ ನಂತರವೂ ದೇಹದಲ್ಲಿ ಶಕ್ತಿ ಕಾಪಾಡಿಕೊಳ್ಳಲು ವೈದ್ಯರು ನೀಡಿದ ಈ ಕೆಲವು ಸಲಹೆಗಳನ್ನು ಪಾಲಿಸಬೇಕು. ಉಪವಾಸದ ಹಿಂದಿನ ರಾತ್ರಿ ನಾರಿನಾಂಶ, ಕೊಬ್ಬು ಮತ್ತು ಪ್ರೊಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ತುಪ್ಪ, ಡ್ರೈಫ್ರೂಟ್ಸ್‌, ಪನೀರ್, ಮೊಸರು, ತೆಂಗಿನಕಾಯಿ ಮತ್ತು ಹಣ್ಣುಗಳನ್ನು ಸೇವಿಸಬೇಕು. ಯಾವುದೇ ಕಾರಣಕ್ಕೂ ಮಸಾಲೆ ಸಮೃದ್ಧ ಆಹಾರ ಸೇವಿಸಬಾರದು ಎಂದು ವೈದ್...