Prayagraj, ಜನವರಿ 30 -- ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ತ್ರಿವೇಣಿ ನದಿ ಸಂಗಮ ನಗರ ಪ್ರಯಾಗ್‌ರಾಜ್‌ನಲ್ಲಿ ಕೋಟ್ಯಂತರ ಭಕ್ತರು ನಿತ್ಯ ಪುಣ್ಯ ಸ್ನಾನ ಮಾಡುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ದುರಂತಗಳು ಮರುಕಳಿಸುತ್ತಲೇ ಇವೆ. ವಾರದ ಹಿಂದೆ ಆಕಸ್ಮಿಕ ಬೆಂಕಿ ಬಿದ್ದು ಟೆಂಟ್‌ಗಳು ಸುಟ್ಟು ಹೋಗಿದ್ದವು. ಕಾಲ್ತುಳಿತದಿಂದ ಮೂವತ್ತು ಮಂದಿ ಮೃತಪಟ್ಟಿದ್ದರು. ಇದರ ನಡುವೆಯೇ ಮತ್ತೊಂದು ಅಗ್ನಿ ದುರಂತ ಗುರುವಾರ ಮಧ್ಯಾಹ್ನ ಮಹಾ ಕುಂಭ ನಡೆಯುತ್ತಿರುವ ಮೈದಾನದಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ಹಬ್ಬುವುದನ್ನು ತಡೆದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಸುಟ್ಟ ಗಾಯಗಳಾಗಲಿ ಆಗಿಲ್ಲ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬೆಂಕಿ ಆರಿಸುವ ಕಾರ್ಯಾಚರಣೆ ಮುಂದುವರಿದಿದೆ.

ಗುರುವಾರ ಕೂಡ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕಾಗಿ ಆಗಮಿಸಿದ್ದಾರೆ. ಭಾರೀ ಜನಜಂಗುಳಿ ಅಲ್ಲಿದೆ. ಈ ವೇಳೆ ಮಹಾಕುಂಭ ಮೇಳ ನಡೆಯುವ ಪ್ರದೇಶದ ಛತ್ನಾಗ್ ಘಾಟ್ ನಾಗೇಶ್ವರ ಘಾಟ್ ಸೆಕ್ಟರ್ 22 ಪ್ರದೇಶದಲ್ಲಿ ಏ...