ಭಾರತ, ಜನವರಿ 27 -- ಭಾರತದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತಿದೆ. 144 ವರ್ಷಗಳಿಗೊಮ್ಮೆ ಮಹಾ ಕುಂಭ ಮೇಳ ನಡೆಯುತ್ತದೆ. ಪ್ರಯಾಗ್ ರಾಜ್‌ನಲ್ಲಿ 12 ಪೂರ್ಣಕುಂಭಗಳು ನಡೆದಾಗ ಅದನ್ನು ಮಹಾಕುಂಭ ಎಂದು ಕರೆಯಲಾಗುತ್ತದೆ. ಮಹಾಕುಂಭವು 12 ಹುಣ್ಣಿಮೆಗಳಲ್ಲಿ ಒಮ್ಮೆ ಸಂಭವಿಸುತ್ತದೆ. ಈ ಬಾರಿ ಮಹಾ ಕುಂಭ ಮೇಳ ನಡೆಯುತ್ತಿದೆ.

ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ನಡೆಯುವ ಕಾರಣ ಇದರಲ್ಲಿ ದೇಶದಾದ್ಯಂತ ಮಾತ್ರವಲ್ಲ ಪ್ರಪಂಚದಾದ್ಯಂತ ಜನರು ಭಾಗವಹಿಸುತ್ತಾರೆ. ಈ ಪವಿತ್ರ ಧಾರ್ಮಿಕ ಜಾತ್ರೆಯಲ್ಲಿ ಪ್ರಪಂಚದಾದ್ಯಂತ ಇರುವ ನಾಗಸಾಧುಗಳು ಸಹ ಭಾಗವಹಿಸುತ್ತಾರೆ. ಕುಂಭಮೇಳ 2025 ಜನವರಿ 13 ರಂದು ಪ್ರಾರಂಭವಾಗಿದ್ದು, ಫೆಬ್ರವರಿ 26ರ ಮಹಾಶಿವರಾತ್ರಿ ದಿನದವರೆಗೆ ನಡೆಯಲಿದೆ.

ಮಹಾಕುಂಭ ಮೇಳದ ಸಮಯದಲ್ಲಿ ಪ್ರತಿದಿನ ಪುಣ್ಯಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ, ಆದರೆ ಅಮೃತ ಸ್ನಾನಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಅಮೃತ ಸ್ನಾನದ ದಿನದಂದು, ನಾಗಬಾಬಾ ಮತ್ತು ಸಂತರು ತಮ್ಮ ಶಿಷ್ಯರೊಂದಿಗೆ ಸಂಗಮದಲ್ಲಿ ಗಂಗೆ...