ಭಾರತ, ಫೆಬ್ರವರಿ 10 -- Worlds Biggest Traffic Jam: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಕಡೆಗೆ ದೇಶದ ಜನತೆ ಮುಖಮಾಡಿರುವ ಕಾರಣ, ಅಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮಹಾ ಕುಂಭಮೇಳಕ್ಕೆ ತೆರಳುವ ದಾರಿಯಲ್ಲಿ 300 ಕಿಮೀ ಉದ್ದಕ್ಕೂ ವಾಹನಗಳು ನಿಧಾನಗತಿಯಲ್ಲಿದ್ದು, ಬಹುತೇಕ ಪಾರ್ಕಿಂಗ್ ಸ್ಥಳದಂತೆ ಗೋಚರಿಸತೊಡಗಿದೆ ಎಂಬ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಂಡುಬಂದಿವೆ. ಪ್ರಯಾಗ್‌ರಾಜ್ ಸಂಚಾರ ದಟ್ಟಣೆ ಬಹುಶಃ ಜಗತ್ತಿನ ಅತಿದೊಡ್ಡ ಸಂಚಾರ ದಟ್ಟಣೆ ಇದ್ದೀತು ಎಂದೂ ಜನ ಆಡಿಕೊಳ್ಳತೊಡಗಿದ್ದಾರೆ.

ಮಹಾ ಕುಂಭಮೇಳಕ್ಕೆ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಕಾರಣ ವಾಹನಗಳ ಸಾಗರವೇ ಅಲ್ಲಿ ಕಂಡುಬಂದಿದೆ. ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸದ್ಯ ಇರುವ ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಕರಗಲು 48 ಗಂಟೆ ಬೇಕಾಗಬಹುದು, 300 ಕಿಮೀ ಉದ್ದಕ್ಕೂ ವಾಹನ ಸಂಚಾರ ನಿಧಾನವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳದಲ್ಲಿ ಪಾಲ...