ಭಾರತ, ಫೆಬ್ರವರಿ 19 -- ಹಿಂದೂ ಧರ್ಮದಲ್ಲಿ ಪ್ರತಿ ಮಾಸಕ್ಕೂ ಅದರದ್ದೇ ಮಹತ್ವವಿದೆ. ಆದರೆ ದಕ್ಷಿಣಾಯನದಲ್ಲಿ ಕಾರ್ತಿಕ ಮಾಸ ಮತ್ತು ಉತ್ತರಾಯಣದಲ್ಲಿ ಮಾಘ ಮಾಸ ಅತ್ಯಂತ ಶ್ರೇಯಸ್ಕರ ಎಂದು ಜ್ಯೋತಿಷಿಗಳಾದ ಚಿಲಕಮರ್ತಿ ಪ್ರಭಾಕರ ಶರ್ಮಾ ಹೇಳುತ್ತಾರೆ. ಸದ್ಯ ಮಾಘ ಮಾಸ ನಡೆಯುತ್ತಿದ್ದು, ಈ ಮಾಸದಲ್ಲಿ ಬರುವ ತಿಥಿಗಳು, ಪಂಚಮಿ, ಸಪ್ತಮಿ, ಅಷ್ಟಮಿ, ಏಕಾದಶಿ, ದ್ವಾದಶಿ, ಹುಣ್ಣಿಮೆಗಳು ಎಲ್ಲವಕ್ಕೂ ವಿಶೇಷ ಮಹತ್ವವಿದೆ. ಆದರೆ ಇವುಗಳಲ್ಲಿ ಮಾಘ ಮಾಸದ ಏಕಾದಶಿ ಅತ್ಯಂತ ಪ್ರಾಮುಖ್ಯವನ್ನು ಹೊಂದಿದೆ. ಜಯ ಏಕಾದಶಿಯ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ತಿಳಿಸುವ ಚಿಲಕಮರ್ತಿಗಳು ಮಾಘ ಪುರಾಣದ ಅಧ್ಯಾಯ 11ರ ಪ್ರಕಾರ ಮಹಾಭಾರತದಲ್ಲಿ ಭೀಮನು ಈ ವಿಶೇಷ ಏಕಾದಶಿ ವ್ರತವನ್ನು ಆಚರಿಸುತ್ತಾನೆ.

ಮಾಘ ಮಾಸದ ಏಕಾದಶಿಯಂದು ಮಾಘ ಪುರಾಣವನ್ನು ಓದುವುದು ಅಥವಾ ಈ ಏಕಾದಶಿ ವ್ರತದ ಕಥೆಯನ್ನು ಕೇಳುವುದರಿಂದ ನಮ್ಮ ಪಾಪಗಳೆಲ್ಲವೂ ದೂರಾಗಿ, ಪುಣ್ಯ ದೊರಕುತ್ತದೆ. ಈ ದಿನ ಉಪವಾಸ ವತ್ರ ಆಚರಿಸುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ನೆಲೆಸುವ ಜೊತೆಗೆ ವಿಷ್ಣು ...