ಭಾರತ, ಏಪ್ರಿಲ್ 8 -- ಮಡಿಕೇರಿ: ಹೋಂ ಸ್ಟೇನಲ್ಲಿ ಪ್ರವಾಸಕ್ಕಾಗಿ ಬಂದ ತಾಯಿ ಹಾಗೂ ಮಗಳಿಗೆ ಕಿರುಕುಳ ಉಂಟಾಗಿದೆ. ತಾಯಿ ಮತ್ತು ಮಗಳಿಗೆ ಹೋಂ ಸ್ಟೇ ಕೇರ್ ಟೇಕರ್‌ನಿಂದ ಕಿರುಕುಳ ನಡೆದ ಘಟನೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರು ಮೂವರ ಮೇಲೆ ಎಫ್. ಐ. ಆರ್ ದಾಖಲಿಸಿದ್ದಾರೆ. ಮಡಿಕೇರಿ ರಾಘವೇಂದ್ರ ಟೆಂಪಲ್ ರಸ್ತೆಯಲ್ಲಿರುವ ಕಾವೇರಪ್ಪ‌ ಮಾಲಿಕತ್ವದ ಈಶ್ವರ ನಿಲಯ ಎಂಬ ಹೋಂ ಸ್ಟೇ ನಲ್ಲಿ ಈ ಘಟನೆ ನಡೆದಿದೆ.

ಹೋಂ ಸ್ಟೇ ಕೇರ್ ಟೇಕರ್‌ನಿಂದ ರಾತ್ರಿ 2 ಗಂಟೆಯಿಂದ 4 ಗಂಟೆವರೆಗೆ ಕಿರುಕುಳ ಆಗಿದೆ ಎಂದು ಬೆಂಗಳೂರಿನ ಬಾಣಸವಾಡಿ ನಿವಾಸಿ ಮಮತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಹೋಂ ಸ್ಟೇ ಕೇರ್ ಟೇಕರ್ ಕುಮಾರ ಪ್ರವೀಣ್ ಎಂಬಾತನಿಂದ ಕೃತ್ಯ ನಡೆದಿದ್ದು ಡೋರ್ ಓಪನ್ ಮಾಡುವಂತೆ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನೀಡಲಾಗಿದೆ. ಒಳಗಡೆ ಇರುವ ತಾಯಿ ಹಾಗೂ ಮಗಳು ಆ ಸಂದರ್ಭದಲ್ಲಿ ಭಯಪಟ್ಟಿದ್ದಾರೆ.

ಇದನ್ನೂ ಓದಿ: Employment: ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ, ವಿವಿಧ ಹುದ್ದೆಗಳಿಗೆ ಅರ್ಜಿ ಪ್ರ...