ಭಾರತ, ಫೆಬ್ರವರಿ 6 -- Madhva Navami 2025: ಇಂದು (ಫೆಬ್ರವರಿ 6, ಗುರುವಾರ) ಮಧ್ವ ನವಮಿ. ದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಮಧ್ವಾಚಾರ್ಯರ ನೆನಪಿನ ಅಂಗವಾಗಿ ಮಧ್ವ ನಮವಿಯನ್ನು ಆಚರಿಸಲಾಗುತ್ತದೆ. ಇದು ಗುರುಗಳು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನವಾಗಿದ್ದು ಈ ಕಾರಣದಿಂದ ಈ ದಿನವನ್ನು ಮಧ್ವ ನವಮಿ ಅಂತ ಕರೆಯಲಾಗುತ್ತದೆ.

ಅಧ್ಯಾತ್ಮಿಕ ಗುರುಗಳಾಗಿದ್ದ ಮಧ್ವಾಚಾರ್ಯರು 1238 ರಲ್ಲಿ ವಿಜಯ ದಶಮಿಯಂದು ಕರ್ನಾಟಕ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಪಾಜಕ ಎಂಬಲ್ಲಿ ಒಂದು ಸಣ್ಣ ಕುಟೀರದಲ್ಲಿ ಜನಿಸಿದರು. ಮಧ್ವಾಚಾರ್ಯರ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿ. ಇವರ ಮೂಲ ಹೆಸರು ವಾಸುದೇವ. ಇವರ ಗುರುಗಳಾದ ಅಚ್ಯುತ ಪ್ರಜ್ಞರು ಸನ್ಯಾಸವನ್ನು ನೀಡಿ ಪೂರ್ಣಪ್ರಜ್ಞರೆಂಬ ಹೆಸರು ನೀಡುತ್ತಾರೆ. ಮಧ್ವಾಚಾರ್ಯರು 1317 ರಲ್ಲಿ 79ನೇ ವಯಸ್ಸಿನಲ್ಲಿ ಬದರಿ ಆಶ್ರಮಕ್ಕೆ ನಿರ್ಗಮಿಸಲು ನಿಗದಿಯಾದ ದಿನ, ಮಧ್ವ ನಮವಿ ಅಥವಾ ಮಧ್ವ ಆಚಾರ್ಯ ಕಣ್ಮರೆ ದಿನ ಎಂದು ಕರೆಯಲ್ಪಡುವ ಈ ದಿನವು ಮಾಘ ಮಾಸದ ಶುಕ್ಲ ಪಕ್ಷದ ನಮವಿ ತಿಥಿಯಂದು ಬರುತ್ತ...