ಭಾರತ, ಫೆಬ್ರವರಿ 18 -- ತಮಿಳು ನಟ ಶಿವಕಾರ್ತಿಕೇಯನ್ ಅವರ 40 ನೇ ಹುಟ್ಟುಹಬ್ಬದ (ಫೆಬ್ರವರಿ 17) ಸಂದರ್ಭದಲ್ಲಿ 'ಮದರಾಸಿ' ಸಿನಿಮಾದ ವಿಶೇಷ ಟೀಸರ್ ಬಿಡುಗಡೆ ಮಾಡಲಾಗಿದೆ. ತಮಿಳು ನಿರ್ದೇಶಕ ಎ.ಆರ್. ಮುರುಗದಾಸ್ ಅವರ ಬಹುನಿರೀಕ್ಷಿತ ಚಿತ್ರ 'ಮದರಾಸಿ'ಯ ಮೊದಲ ನೋಟ ಬಿಡುಗಡೆಯಾಗಿದೆ. ಈ ಟೀಸರ್ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. 'ಮದರಾಸಿ' ಚಿತ್ರದ ಟೀಸರ್ ನೋಡಿದ ಅಭಿಮಾನಿಗಳು ಇದೊಂದು ಆಕ್ಷನ್ ಥ್ರಿಲರ್‍‌ ಮಜಾ ನೀಡುವ ಸಿನಿಮಾ. ಖಂಡಿತ ಈ ಸಿನಿಮಾವನ್ನು ನಾವು ನೋಡಲೇಬೇಕು ಎಂದು ಕಾತರರಾಗಿದ್ದಾರೆ. ತಮಿಳು ಸೂಪರ್‌ಸ್ಟಾರ್ ಶಿವಕಾರ್ತಿಕೇಯನ್ ಅಭಿನಯದಲ್ಲಿ ಈ ಸಿನಿಮಾ ಖಂಡಿತವಾಗಿ ಜನರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಶಿವಕಾರ್ತಿಕೇಯನ್ ಅವರ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿರುವ ಕಾರಣ ಸಾಕಷ್ಟು ಜನ ಶುಭಾಶಯ ಕೋರಿದ್ದಾರೆ.

ಶೀರ್ಷಿಕೆಯ ಕಿರುನೋಟ ವೀಡಿಯೊದಲ್ಲಿ ನಟ ಶಿವಕಾರ್ತಿಕೇಯನ್ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಮಾಜಿ...