ಭಾರತ, ಫೆಬ್ರವರಿ 11 -- ಮಲಯಾಳಂನ ಜನಪ್ರಿಯ ನಟ ಉನ್ನಿ ಮುಕುಂದನ್ ಅಭಿನಯದ ಮಾರ್ಕೊ (marco) ಸಿನಿಮಾ ಸೂಪರ್ ಹಿಟ್ ಸಾಧಿಸಿತು. ಬ್ಲಾಕ್‌ಬಸ್ಟರ್ ಸಿನಿಮಾ ಅತ್ಯಂತ ಹಿಂಸಾತ್ಮಕ ಚಲನಚಿತ್ರವಾಗಿ ಅಭಿಮಾನಿಗಳಿಗೆ ಇಷ್ಟವಾಯ್ತು. ಅನಿಮಲ್, ಕಿಲ್ ಚಿತ್ರಕ್ಕಿಂತ ಹೆಚ್ಚು ವೈಲೆಂಟ್‌ ಆಗಿದೆ ಎಂಬ ಮಾತು ಅಭಿಮಾನಿಗಳ ನಡುವೆ ಕೇಳಿಬಂದಿದೆ. ಕಳೆದ ವರ್ಷದ ಡಿಸೆಂಬರ್ 20ರಂದು ಮಲಯಾಳಂ ಭಾಷೆಯಲ್ಲಿ ಮಾರ್ಕೊ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಿರೀಕ್ಷೆಗೆ ತಕ್ಕಂತೆ ಭಾರಿ ಗಳಿಕೆ ಸಾಧ್ಯವಾಯ್ತು. ಆ ಬಳಿಕ ಹಿಂದಿಯಲ್ಲಿಯೂ ಬಿಡುಗಡೆಯಾದ ಚಿತ್ರ ನಂತರ ತೆಲುಗಿನಲ್ಲಿಯೂ ಚಿತ್ರಮಂದಿರಗಳಿಗೆ ಕಾಲಿಟ್ಟಿತು. ಇದೀಗ ಮಾರ್ಕೊ ಚಿತ್ರವು ಈ ವಾರ ಒಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.

ಸದ್ಯ ಮಾರ್ಕೊ ಚಲನಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಥಿಯೇಟರ್‌ನಲ್ಲಿ ಇಲ್ಲದ ಕೆಲವು ದೃಶ್ಯಗಳು ಒಟಿಟಿ ಸ್ಟ್ರೀಮಿಂಗ್‌ನಲ್ಲಿ ಇರುವ ನಿರೀಕ್ಷೆಯೊಂದಿಗೆ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ.

ಮಾರ್...