ಭಾರತ, ಮಾರ್ಚ್ 6 -- Dr M R Doreswamy Death: ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಂ ಆರ್ ದೊರೆಸ್ವಾಮಿ ಇಂದು (ಮಾರ್ಚ್ 6) ವಿಧಿವಶರಾದರು. ನಾಳೆ (ಮಾರ್ಚ್ 7) ಅವರ ಅಂತ್ಯಕ್ರಿಯೆ ನಡೆಯಲಿದೆ. ಆಂಧ್ರ ಪ್ರದೇಶದ ಚಿತ್ತೂರು ಮೂಲದ ದೊರೆಸ್ವಾಮಿ ಅವರು ಎಂಎ, ಬಿಎಲ್ ವ್ಯಾಸಂಗ ಮಾಡಿದ್ದು, ಬೆಂಗಳೂರಿನಲ್ಲಿ ಶಿಕ್ಷಣ ತಜ್ಞರಾಗಿ, ಪಿಇಎಸ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದವರು.

ದೊರೆಸ್ವಾಮಿ ಅವರ ಪತ್ನಿ ಕೆ ರಾಧಾ ಮನೋಹರಿ. ದೊರೆಸ್ವಾಮಿ ಪತ್ನಿ ಹಾಗೂ ಒಬ್ಬ ಮಗ, ಮಗಳನ್ನು ಅಗಲಿದ್ಧಾರೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

Published by HT Digital Content Services with permission from HT Kannada....