ಭಾರತ, ಏಪ್ರಿಲ್ 1 -- ಜಾಗತಿಕ ಕಚ್ಚಾ ತೈಲ ದರಗಳಲ್ಲಿನ ಬದಲಾವಣೆಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ತೈಲ ಕಂಪನಿಗಳು ನಿಯಮಿತವಾಗಿ ದರ ಪರಿಷ್ಕರಣೆ ಮಾಡುತ್ತಿವೆ. LPG 19 ಕೆಜಿ ವಾಣಿಜ್ಯ ಗ್ಯಾಸ್‌ ಬೆಲೆಯನ್ನು 41ರೂಪಾಯಿಗಳಷ್ಟು ಇಳಿಕೆ ಮಾಡಿದೆ. ಹೊಸ ದರಗಳು ಇಂದು ಮಂಗಳವಾರದಿಂದ (ಏಪ್ರಿಲ್ 1) ಜಾರಿಗೆ ಬರುತ್ತವೆ. ಬೆಂಗಳೂರಿನಲ್ಲಿ 19ಕೆ ಜಿ ಗ್ಯಾಸ್‌ ಸಿಲಿಂಡರ್ ಬೆಲೆ ಪ್ರಸ್ತುತ 1,836ರೂ ಆಗಿದೆ.

ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1762ರೂ ಆಗಿದೆ. ಇದಕ್ಕೂ ಮೊದಲು, ಫೆಬ್ರವರಿ 1 ರಂದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 7ರೂಪಾಯಿ ಕಡಿಮೆ ಮಾಡಲಾಗಿತ್ತು. ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,762ರೂ ಮುಂಬೈನಲ್ಲಿ ಬೆಲೆ 1,714.50ರೂ ಕೋಲ್ಕತ್ತಾದಲ್ಲಿ 1,872ರೂ ಮತ್ತು ಚೆನ್ನೈನಲ್ಲಿ 1,924.50ರೂ ಆಗಿದೆ. ಫೆಬ್ರವರಿಯಲ್ಲಿ 7ರೂಪಾಯಿ ಇಳಿಕೆಯಾಗಿದ್ದ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಮಾರ್ಚ್ 1 ರಂದು ಮತ್ತೆ ಏರಿಕೆ ಮ...