ಭಾರತ, ಏಪ್ರಿಲ್ 24 -- ಪ್ರೀತಿಯಲ್ಲಿ ಬಿದ್ದವರಿಗೆ ಪ್ರಪಂಚದ ಅರಿವೇ ಇರುವುದಿಲ್ಲ ಎಂದು ಹೇಳುತ್ತಾರೆ. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಪರಿಜ್ಞಾನ ಇರುವುದಿಲ್ಲ. ಈ ಪ್ರೀತಿ-ಪ್ರೇಮದ ಹುಚ್ಚು ಅತಿಯಾದ್ರೆ ಮನುಷ್ಯ ಏನೂ ಬೇಕಾದ್ರೂ ಆಗಬಹುದು, ಈಗ ಪ್ರೀತಿಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಯೊಂದು ಚೀನಾದಲ್ಲಿ ಪತ್ತೆಯಾಗಿದೆ. ಅದಕ್ಕೆ ʼಲವ್‌ ಬ್ರೈನ್ʼ ಎಂದು ಹೆಸರಿಸಲಾಗಿದೆ.

ಚೀನಾದ 18 ವರ್ಷ ಚೀನಾದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಗೆ ದಿನಕ್ಕೆ 100 ಬಾರಿ ಕರೆ ಮಾಡಿದ್ದಾಳೆ. ಇದು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೇ ಆ ಹುಡುಗಿಯು ಲವ್‌ ಬ್ರೈನ್‌ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

ನೈಋತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದ ಕ್ಸಿಯಾಯು ಎಂಬ ಎಂಬ ಹೆಸರಿನ ಹುಡುಗಿ ಈ ಗೀಳು ರೋಗದಿಂದ ಬಳಸಲುತ್ತಿದ್ದಾಳೆ. ಇದು ಅವಳ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ, ಮಾತ್ರವಲ್ಲ ಅವಳ ಪ್ರಿಯಕರ ಬದುಕು ಕೂಡ ನೆಮ್ಮದಿ ಇಲ್ಲದಂತಾಗಿದೆ ಎಂದು ಚೀನಾ ಮಾಧ್ಯಮ ಯುಯೆನಿ ವರದಿ...