Bengaluru, ಏಪ್ರಿಲ್ 17 -- ರಾಮನವಮಿ ಎಂದರೆ ಸಾಕು ರಾಮನ ವ್ಯಕ್ತಿತ್ವಗಳು ನೆನಪಾಗುತ್ತದೆ. ಅದರ ಜೊತೆಯಲ್ಲಿ ರಾಮನಿಗೆ ಸಂಬಂಧಿಸಿದ ದೇಗುಲಗಳೂ ನೆನಪಾಗುತ್ತದೆ. ಈ ಬಾರಿಯಂತೂ ಅಯೋಧ್ಯೆಯ ರಾಮಮಂದಿರ ರಾಮ ನವಮಿಯ ಹೈಲೈಟ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮರ್ಯಾದಾ ಪುರುಷೋತ್ತಮ ಎಂದೇ ಕರೆಸಿಕೊಳ್ಳುವ ಭಗವಾನ್ ಶ್ರೀರಾಮ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಪುತ್ರ, ಆದರ್ಶ ಪತಿ ಹೀಗೆ ಪ್ರತಿಯೊಂದು ರೀತಿಯಲ್ಲೂ ರಾಮ ಪ್ರತಿಯೊಬ್ಬರಿಗೂ ಆದರ್ಶ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಭಗವಾನ್ ರಾಮ ತ್ರೇತಾಯುಗದಲ್ಲಿ ಜನಿಸಿದ್ದು ರಾಮನನ್ನು ಮೂರ್ತಿ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನ ಜನ್ಮಸ್ಥಳವಾದ ಅಯೋಧ್ಯೆ 500 ವರ್ಷಗಳ ಹೋರಾಟದ ಬಳಿಕ ಹಿಂದೂಗಳಿಗೆ ಮರಳಿ ಸಿಕ್ಕಿದೆ. ಭಾರತದಲ್ಲಿರುವ ರಾಮನಿಗೆ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಪ್ರಸಿದ್ಧ ದೇಗುಲಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದು ಭಗವಾನ್ ಶ್ರೀರಾಮನ ಜನಸ್ಥಳ. ಭಾರತದ ಅತ್ಯಂತ ಪ್ರಾಚೀನ ನಗರ ಕೂಡ ಹೌದು. ಸರಯೂ ನದಿ ದಡದಲ್ಲಿರುವ ಅಯೋಧ್ಯೆಯು ಹಿಂದೂಗಳ ಪ್ರಮುಖ 7 ಯಾತ್ರಾ ಸ...