Bangalore, ಮಾರ್ಚ್ 5 -- ಬೆಂಗಳೂರು: 2019 ರ ಲೋಕಸಭೆಗೆ ನಡೆದ ಚುನಾವಣೆ ದಿನಾಂಕಕ್ಕೆ ಹೋಲಿಸಿದರೆ ಮೊದಲ ಹಂತದ ಚುನಾವಣೆಗೆ ಕೇವಲ 40 ದಿನಗಳು ಮಾತ್ರ ಉಳಿದಿವೆ. ಇದುವರೆಗೂ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಅಥವಾ ಕಾಂಗ್ರೆಸ್ ಇದುವರೆಗೂ ಅಭ್ಯರ್ಥಿಗಳ ಪಟ್ಟಿ ಆಖೈರು ಮಾಡಿಲ್ಲ. ಅವರನ್ ಬಿಟ್ ಇವರ್ಯಾರು ಎನ್ನುವ ಹಂತದಲ್ಲಿಯೇ ಇವೆ. ಆದರೆ ಅಭ್ಯರ್ಥಿಗಳು ಇಲ್ಲದಿದ್ದರೂ ಈಗಾಗಲೇ ಮೂರೂ ಪಕ್ಷಗಳ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದೊಂದಿಗೆ ನೇರ ಹಣಾಹಣಿಗೆ ಇಳಿದಿದೆ. ಇದು ಬಿಜೆಪಿಯ ಚುನಾವಣಾ ತಂತ್ರವಲ್ಲದೆ ಮತ್ತೇನೂ ಅಲ್ಲ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ವರಿಷ್ಠರ ತಲೆಬೇನೆಯನ್ನು ಹೆಚ್ಚಿಸಿದೆ.

ಜೊತೆಗೆ ಇದುವರೆಗೂ ಬೇರು ಬಿಡಲಾಗದ ಹಳೇ ಮೈಸೂರು ಭಾಗದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿದೆ. ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಸಂದರ್ಭಗಳಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಿದೆಯೇ ಹೊರತು ಸಣ್ಣ ಪಕ್ಷಕ್ಕೆ ಅಲ್ಲ ಎನ್ನುವುದು ...