ಭಾರತ, ಜನವರಿ 31 -- ಚಳಿಗಾಲದಲ್ಲಿ ಶೀತ ವಾತಾವರಣದಿಂದ ತಪ್ಪಿಸಿಕೊಳ್ಳಲು ತಲೆಗೆ ಟೋಪಿ, ಮಫ್ಲರ್ ಧರಿಸುತ್ತೇವೆ. ಇದರೊಂದಿಗೆ ಶೀತ, ನೆಗಡಿ ಆಗಬಹುದು ಎನ್ನುವ ಭಯಕ್ಕೆ ತಲೆಸ್ನಾನ ಮಾಡುವುದು ಕಡಿಮೆ. ಆದರೆ ಇವೆಲ್ಲವೂ ಕೂದಲಿನಲ್ಲಿ ಶಿಲೀಂಧ್ರ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದು ತುರಿಕೆ ಮತ್ತು ಸುಡುವಿಕೆಗೆ ಕಾರಣವಾಗುತ್ತದೆ. ವಾಸ್ತವವಾಗಿ, ಸರಿಯಾದ ಕೂದಲ ಆರೈಕೆಯ ಕೊರತೆಯಿಂದಾಗಿ ಹೇನುಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದರಿಂದ ಪರಿಹಾರ ಪಡೆಯಲು, ಜನರು ನಿಯಮಿತವಾಗಿ ಹೇನು ವಿರೋಧಿ ಶಾಂಪೂಗಳನ್ನು ಬಳಸಿ ತಲೆಸ್ನಾನ ಮಾಡುತ್ತಾರೆ. ಆದರೆ ಇದರ ಹೊರತಾಗಿ, ಕೆಲವು ಮನೆಮದ್ದುಗಳು ಹೇನು ನಿವಾರಣೆಗೆ ಉಪಯುಕ್ತವಾಗಿವೆ. ಹೇನುಗಳಿಂದ ಪರಿಹಾರ ಪಡೆಯಲು ಸರಳ ಹಾಗೂ ಪರಿಣಾಮಕಾರಿ ಮನೆಮದ್ದುಗಳು ಯಾವುವು ನೋಡಿ.

ಸಿಡಿಸಿ ಪ್ರಕಾರ, ಹೇನುಗಳು ಒಂದು ರೀತಿಯ ಪರಾವಲಂಬಿ ಮತ್ತು ಕೀಟಗಳಾಗಿವೆ. ಇವು ತಲೆ ಮತ್ತು ಪ್ಯುಬಿಕ್ ಪ್ರದೇಶದಲ್ಲಿ ಕಂಡುಬರುತ್ತವೆ. ಹೇನುಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ ಮತ್ತು ರಕ್ತ ಕುಡಿದು ಬದುಕುತ್ತವೆ. ಯಾವು...