Bengaluru, ಮಾರ್ಚ್ 31 -- ಪ್ರತಿ ರಾಶಿಯೂ ಭಿನ್ನ ಮತ್ತು ಅದರದ್ದೇ ಆದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ನ್ಯಾಯದ ಸಂಕೇತ ಹೊಂದಿರುವ ತುಲಾ ರಾಶಿಯವರು ಸಮತೋಲನ, ಸಾಮರಸ್ಯ ಮತ್ತು ನ್ಯಾಯದ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸ್ವಾಭಾವಿಕವಾಗಿ ಸಾಮಾಜಿಕ, ಸ್ನೇಹಪರ ಮತ್ತು ಆಕರ್ಷಕವಾಗಿರುತ್ತಾರೆ, ಇದರಿಂದಾಗಿ ಅವರು ಇತರರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದಾಗ್ಯೂ, ಪ್ರತಿ ರಾಶಿಚಕ್ರ ಚಿಹ್ನೆಯಂತೆ, ತುಲಾ ರಾಶಿಯು ಕೂಡ ಕೆಲವೊಂದು ಋಣಾತ್ಮಕ ಅಂಶಗಳನ್ನು, ಕರಾಳ ಮುಖವನ್ನು ಹೊಂದಿದೆ. ತುಲಾ ರಾಶಿಯವರ ಕೆಲವೊಂದು ಪ್ರವೃತ್ತಿಗಳು ಕೆಲವೊಮ್ಮೆ ಅವರನ್ನು ನಿರ್ಧಾರ ತೆಗೆದುಕೊಳ್ಳದ, ವಿಶ್ವಾಸಾರ್ಹವಲ್ಲದ ಅಥವಾ ಸೇಡಿನ ಮನೋಭಾವದ ವ್ಯಕ್ತಿಗಳು ಎಂದು ತೋರುವಂತೆ ಮಾಡಬಹುದು.

ತುಲಾ ರಾಶಿಯವರು ಯಾವಾಗಲೂ ಸಮತೋಲನವನ್ನು ಹುಡುಕುತ್ತಿರುತ್ತಾರೆ, ಇದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರನ್ನು ಹಿಂಜರಿಯುವಂತೆ ಮಾಡುತ್ತದೆ. ಎಲ್ಲಾ ಆಯ್ಕೆಗಳನ್ನು ತೂಕ ಮಾಡುವುದು ಒಳ್ಳೆಯದು, ಆದರೆ ಇದು ಕೆಲವೊಮ್ಮೆ ಅವರಿಗೆ ನಿರ್ಧಾರ ತೆ...