ಭಾರತ, ಏಪ್ರಿಲ್ 5 -- ಬೆಂಗಳೂರು: ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಜನನಿಬಿಡ ಪ್ರದೇಶಕ್ಕೆ ಚಿರತೆ ನುಗ್ಗಿತ್ತು. ದಾರಿ ತಪ್ಪಿ ಬಂದು ಮನೆಗೆ ನುಗ್ಗಿದ ಚಿರತೆಯನ್ನು ದಂಪತಿ ಮನೆಯಲ್ಲೇ ಕೂಡಿ ಹಾಕಿದ ಘಟನೆ ಜರುಗಿದೆ. ಚಿರತೆಯನ್ನು ಬಲೆಗೆ ಬೀಳಿಸಿ ರಕ್ಷಿಸುವಲ್ಲಿ ಅರಣ್ಯ ಅಧಿಕಾರಿಗಳಿಗೆ ಈ ದಂಪತಿ ಸಹಾಯ ಮಾಡಿದ್ದಾರೆ. ಏಪ್ರಿಲ್‌ 3ರಂದು ಈ ಘಟನೆ ಜರುಗಿದೆ. ಈ ಘಟನೆಯು ಜನನಿಬಿಡ ಪ್ರದೇಶವಾದ ಕುಂಟ್ಲು ರೆಡ್ಡಿ ಲೇಔಟ್ನಲ್ಲಿ ಸಂಭವಿಸಿದೆ. ಇದು 2 ಕಿ.ಮೀ ವ್ಯಾಪ್ತಿಯಲ್ಲಿ ಗಮನಾರ್ಹ ಹಸಿರು ಹೊದಿಕೆಯನ್ನು ಹೊಂದಿಲ್ಲ. ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ವೆಂಕಟೇಶ್ ಮತ್ತು ಅವರ ಪತ್ನಿ ವೆಂಕಟಲಕ್ಷ್ಮಿ ಬೆಳಿಗ್ಗೆ ಕಾಫಿ ಮತ್ತು ಟಿವಿ ನೋಡುತ್ತಿದ್ದಾಗ ಮೂರು ಅಂತಸ್ತಿನ ಕಟ್ಟಡದ ನೆಲಮಹಡಿ ಮನೆಗೆ ಚಿರತೆ ಸದ್ದಿಲ್ಲದೆ ಪ್ರವೇಶಿಸಿದೆ.

ಬೆಳಗಿನ ಸಮಯದಲ್ಲಿ ಟೀ ಕುಡಿದು ತಿಂಡಿ ತಿನ್ನುತ್ತಾ ಇರುವ ಸಂದರ್ಭದಲ್ಲಿ ಪ್ರಾಣಿಯೊಂದು ಕೋಣೆಯ ಒಳ ನುಗ್ಗಿರುವುದು ತಿಳಿದು ಬಂದಿತಂತೆ. ಅದು ಚಿರತೆಯೇ ಇರಬಹುದು ಎಂಬ ಅನುಮಾನವೂ ಇರುವ ಕಾರಣ ಗಂಡ, ...