Mysuru, ಫೆಬ್ರವರಿ 11 -- Leopard in Mysore Aparment: ಕಳೆದ ತಿಂಗಳು ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಕಂಡು ಎರಡು ವಾರಕ್ಕೂ ಹೆಚ್ಚು ಕಾಲ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈಗ ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಕೆಲವು ದಿನಗಳಿಂದ ಇದೇ ಭಾಗದಲ್ಲಿ ಓಡಾಡುತ್ತಿದ್ದ ಚಿರತೆ ಈಗ ಅಪಾರ್ಟ್‌ಮೆಂಟ್‌ ಅನ್ನೇ ಪ್ರವೇಶಿಸಿದೆ. ಚಿರತೆ ಹೆಜ್ಜೆ ಗುರುತು ಗಮನಿಸಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಚಿರತೆ ಕಾರ್ಯಪಡೆಯ ಸಿಬ್ಬಂದಿ ಇಲ್ಲಿಗೆ ಆಗಮಿಸಿ ಹೆಜ್ಜೆ ಗುರುತು ನೋಡಿ ಇದು ಚಿರತೆಯದ್ದೇ ಎಂದು ಖಚಿತಪಡಿಸಿದ್ದಾರೆ. ಈ ಭಾಗದಲ್ಲಿ ಚಿರತೆ ಸಂಚಾರ ಇದೆ. ಭಯ ಎಂದು ಅರಣ್ಯ ಇಲಾಖೆಯವರು ಹೇಳಿ ಹೋದ ಬೆನ್ನಲ್ಲೇ ಮಂಗಳವಾರ ಮತ್ತೆ ಬಂದಿರುವ ಚಿರತೆ ನವಿಲನ್ನು ಕೊಂದು ಹಾಕಿ ಹೋಗಿದೆ.

ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಬ್ರಿಗೇಡ್‌ ಸಿಂಪೋನಿ ಅಪಾರ್ಟ್‌ಮೆಂಟ್‌ನಲ್ಲಿ ಅನಗ...