ಭಾರತ, ಮಾರ್ಚ್ 17 -- Latest OTT releases this week: ಮೊದಲೆಲ್ಲ ಚಿತ್ರಮಂದಿರಗಳಲ್ಲಿ ಪ್ರತಿ ಶುಕ್ರವಾರ ಯಾವ ಸಿನಿಮಾ ಬಿಡುಗಡೆಯಾಗಲಿದೆ ಎಂದು ಜನರು ಕಾಯುತ್ತಿದ್ದರು. ಈಗ ಚಿತ್ರಮಂದಿರಗಳ ಜತೆಗೆ ಒಟಿಟಿಗಳಲ್ಲಿ ಯಾವ ಸಿನಿಮಾ ರಿಲೀಸ್‌ ಆಗಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ವಾರ ಅಂದರೆ ಈ ವಾರ ಮಾರ್ಚ್‌ 17ರಿಂದ ಮಾರ್ಚ್‌ 23ರವರೆಗೆ ವಿವಿಧ ಒಟಿಟಿಗಳಲ್ಲಿ ಒಟ್ಟು ಎಂಟು ಸಿನಿಮಾಗಳು ರಿಲೀಸ್‌ ಆಗಲಿವೆ. ಈ ವಾರ ಕುತೂಹಲಕಾರಿ ಡ್ರಾಮಾಗಳು, ರೋಚಕ ಥ್ರಿಲ್ಲರ್‌ಗಳು, ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಫ್ಯಾಂಟಸಿ ಸಿನಿಮಾಗಳು ರಿಲೀಸ್‌ ಆಗಲಿವೆ. ಇದರೊಂದಿಗೆ ಬದುಕುಳಿಯವ ಸವಾಲು, ಬದುಕನ ಹೋರಾಟದ ಕಥೆಗಳ ಸಿನಿಮಾಗಳು ರಿಲೀಸ್‌ ಆಗಲಿವೆ. ಈ ವಾರ ಬಿಡುಗಡೆಯಾಗುವ 8 ಸಿನಿಮಾಗಳ ವಿವರ ಇಲ್ಲಿದೆ.

ಇಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಅನೋರಾ ಎಂಬ ಸಿನಿಮಾ ಬಿಡುಗಡೆಯಾಗಲಿದೆ. ಒಬ್ಬ ಒಲಿಗಾರ್ಚ್‌ನ ಮಗನನ್ನು ಆಕಸ್ಮಿಕವಾಗಿ ಭೇಟಿಯಾಗಿ ಮದುವೆಯಾಗುವುದರಿಂದ ಬ್ರೂಕ್ಲಿನ್‌ನ ಯುವತಿ ಅನೋರಾಗೆ ಸಿಂಡ್ರೆಲಾ ನಿರೂಪಣೆ ಮಾಡಲ...