Bengaluru, ಏಪ್ರಿಲ್ 13 -- OTT Releases This Week: ಈ ವಾರ ಒಟಿಟಿಯಲ್ಲಿ ಒಂದಷ್ಟು ವಿಶೇಷ ಎನಿಸುವ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಅದರಲ್ಲೂ ಮೈ ಜುಂ ಎನಿಸುವ, ಭಯ ಹುಟ್ಟಿಸುವ ಖೌಫ್‌ ಸಿರೀಸ್‌ ಟ್ರೇಲರ್‌ ಮೂಲಕವೇ ಹೆದರಿಸಿದೆ. ಇನ್ನುಳಿದಂತೆ, ಈ ವಾರದ ಪ್ರಮುಖ ಸಿನಿಮಾ ಮತ್ತು ಸಿರೀಸ್‌ಗಳ ಕುರಿತು ಮಾಹಿತಿ ಇಲ್ಲಿದೆ.

ದಿ ಲಾಸ್ಟ್‌ ಆಫ್‌ ಅಸ್‌ ಸೀಸನ್‌ 2: ದಿ ಲಾಸ್ಟ್‌ ಆಫ್‌ ಅಸ್‌ ಸೀಸನ್‌ 2 ಅಮೆರಿಕನ್‌ ವೆಬ್‌ ಸಿರೀಸ್‌ ಏಪ್ರಿಲ್‌ 14ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಫಂಗಲ್‌ ಇನ್‌ಫೆಕ್ಷನ್‌ ಹಿನ್ನೆಲೆಯಲ್ಲಿ ಈ ಸಿರೀಸ್‌ ಸಾಗಲಿದೆ. ಇದರ ಮೊದಲ ಸೀಸನ್‌ 2020ರಲ್ಲಿ ರಿಲೀಸ್ ಆಗಿತ್ತು. ಇದೀಗ ಈ ಸಿರೀಸ್‌ ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ದಾವೀದ್‌: ಗೋವಿಂದ್‌ ವಿಷ್ಣು ನಿರ್ದೇಶನದ ಮಲಯಾಳಂನ ದಾವೀದ್‌ ಸಿನಿಮಾ ಇದೀಗ ಒಟಿಟಿ ಪ್ಲೇ ಪ್ರೀಮಿಯಮ್‌ನಲ್ಲಿ ಏಪ್ರಿಲ್‌ 18ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ಬೌನ್ಸರ್‌ವೊಬ್ಬನ ಜೀವನದ ಏರಿಳಿತಗಳನ್ನು ಈ ಸಿನಿಮ...