Bengaluru, ಜನವರಿ 27 -- Violent Fish Lamprey: ಈ ಮೀನಿನ ಬಗ್ಗೆ ನೀವು ಕೇಳಿದರೆ ಅಚ್ಚರಿ ಪಡಬಹುದು. ಇದಕ್ಕೆ ರೆಕ್ಕೆಗಳೇ ಇಲ್ಲ, ಅಲ್ಲದೆ ಒಂದು ಗಟ್ಟಿಯಾದ ಮುಳ್ಳು ಕೂಡ ಇಲ್ಲ, ಆದರೆ ಈ ಮೀನು ಸಮುದ್ರದಲ್ಲಿ ಅಥವಾ ನದಿಯಲ್ಲಿ ಎಲ್ಲಾದರೂ ತನ್ನ ಬೇಟೆಯನ್ನು ನೋಡಿದರೆ ಮುಗಿಯಿತು. ಮತ್ತೆ ಅದರ ರುಚಿ ನೋಡದೇ ವಿರಮಿಸುವುದಿಲ್ಲ. ಜಗತ್ತಿನಲ್ಲಿ ಅತ್ಯಂತ ಕ್ರೂರ ಮತ್ತು ಭಯಾನಕ ಮೀನು ಎಂದೇ ಹೆಸರು ಗಳಿಸಿರುವ ಪೆಸಿಫಿಕ್ ಲ್ಯಾಂಪ್ರಿ ಎಂಬ ಮೀನಿನ ಕಥೆಯಿದು.

ಹಿಂದಿನ ಕಾಲದಲ್ಲಿ ಡೈನೋಸಾರ್‌ಗಳು ಭೂಮಿಯಲ್ಲಿ ಅಸ್ವಿತ್ವ ಹೊಂದಿದ್ದವು. ಅಂತಹ ದೈತ್ಯ ಡೈನೋಸಾರ್‌ಗಳನ್ನೇ ಈ ಲ್ಯಾಂಪ್ರಿ ಮೀನು ಭಕ್ಷಿಸಿತ್ತು. ಲೈವ್ ಸೈನ್ಸ್ ವರದಿಯ ಪ್ರಕಾರ ಉತ್ತರ ಫೆಸಿಫಿಕ್ ಸಾಗರದಲ್ಲಿ ಈ ಮೀನು ನೆಲೆಸಿತ್ತು. ಕ್ಯಾಲಿಫೋರ್ನಿಯಾದಿಂದ ಅಲಾಸ್ಕದವರೆಗೆ ಹಲವು ತಾಣಗಳಲ್ಲಿ ಈ ಮೀನು ಕಾಣಿಸಿಕೊಂಡಿತ್ತು. ಜತೆಗೆ ರಷ್ಯಾ ಮತ್ತು ಜಪಾನ್‌ನಲ್ಲಿ ಬೆರಿಂಗ್ ಸಮುದ್ರದಲ್ಲೂ ಕಾಣಿಸಿಕೊಂಡಿತ್ತು ಎಂದು ವರದಿ ಹೇಳಿದೆ.

ವಿಜ್ಞಾನಿಗಳ ಪ್ರಕಾರ ಲ್ಯಾಂಪ್ರಿ ಮೀನು, ದ್ರವಾ...